ಹೊಳೆನರಸೀಪುರ: ಇಲ್ಲಿನ ಬೈಪಾಸ್ ರಸ್ತೆಯಿಂದ ಬಂದು ಮೈಸೂರು ರಸ್ತೆಗೆ ಸೇರುವ ತಿರುವಿನಲ್ಲಿ ಕನಕ ಭವನದ ಎದರು ದೊಡ್ಡಗುಂಡಿ ಬಿದ್ದಿದ್ದು ನಿತ್ಯ ಅಪಘಾತಗಳು ಆಗುತ್ತಿವೆ.
ಕಳೆದ ಕೆಲವು ದಿನಗಳಿಂದ ಮಳೆ ಬೀಳುತ್ತಿದ್ದು ಗುಂಡಿಯಲ್ಲಿ ನೀರು ನಿಂತಿದ್ದು ಗುಂಡಿ ಕಾಣದೇ ಬೈಕ್‌ಗಳು ಗುಂಡಿಗೆ ಬಿದ್ದು ಅನೇಕರಿಗೆ ತೊಂದರೆ ಆಗಿದೆ. ಕಾರುಗಳು ಗುಂಡಿಯಲ್ಲಿ ಸಿಲುಕಿ ಪ್ರಯಾಣಿಕರಿಗೆ ತೊಂದರೆ ಆಗಿದೆ. ಇದು ಲೋಕೋಪಯೋಗಿ ಇಲಾಖೆ ರಸ್ತೆ ಆಗಿದ್ದು ಪುರಸಭೆಯವರು ಈ ಗುಂಡಿಯನ್ನು ಮುಚ್ಚಲು ಕ್ರಮ ತೆಗೆದುಕೊಂಡಿಲ್ಲ. ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗೆ ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಬಡಾವಣೆಯ ಜನರು ತಿಳಿಸಿದ್ದಾರೆ.
ಈ ಗುಂಡಿಯಲ್ಲಿ ಬಿದ್ದು ಅನಾಹುತ ಸಂಭವಿಸುವ ಮೊದಲೇ ಗುಂಡಿ ಮುಚ್ಚಿಸಿ ಆಗಬಹುದಾದ ಅನಾಹುತ ತಪ್ಪಿಸಿ. ಇಲ್ಲದಿದ್ದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.