ಜಿಲ್ಲೆ

‘ಹೃದಯ’ ವೈಶಾಲ್ಯತೆ ಮೆರೆದ ಪಿಐ

ಹುಬ್ಬಳ್ಳಿ: ಹೃದಯಸ್ತಂಭನಕ್ಕೊಳಗಾದ ವ್ಯಕ್ತಿಯೊಬ್ಬರನ್ನು ಪೂರ್ವ ಸಂಚಾರ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಾಕ್ಸನ್ ಡಿಸೋಜಾ ಅವರು ಇಲಾಖೆ ವಾಹನದಲ್ಲಿಯೇ ಕೆಎಂಸಿಆರ್‌ಐಗೆ ಶನಿವಾರ ಸಾಗಿಸಿ ಜೀವ ಉಳಿಸಿ ಮಾನವೀಯತೆ ಮೆರೆದಿದ್ದಾರೆ.

ರಾತ್ರಿ ಗಸ್ತು ವೇಳೆ ಕೆಎಂಸಿಆರ್‌ಐ ಮುಂದೆ ಹೃದಯಸ್ತಂಭನವಾಗಿ ಮುಷ್ತಾಕ್ (45) ಎನ್ನುವವರು ಬೈಕ್‌ನಿಂದ ಕೆಳಗೆ ಬಿದ್ದು ರಸ್ತೆಯಲ್ಲಿ ಒದ್ದಾಡುತ್ತಿದ್ದರು. ಇದನ್ನು ನೋಡಿದ ಜಾಕ್ಸನ್ ಡಿಸೋಜಾ ಅವರು ತಮ್ಮ ಇಲಾಖಾ ವಾಹನದಲ್ಲಿಯೇ ಕರೆದುಕೊಂಡು ಆಸ್ಪತ್ರೆಗೆ ಹೋದರು. ನಂತರ ಶುಶ್ರೂಷೆ ಮಾಡಿಸಿದ್ದು, ಈಗ ಅವರು ಗುಣವಾಗಿದ್ದಾರೆ. ಈ ಸತ್ಕಾರ್ಯಕ್ಕೆ ಎಲ್ಲೆಡೆಯಿಂದ ಶ್ಲಾಘನೀಯ ವ್ಯಕ್ತವಾಗಿದೆ.