ಸಾರ್ವಜನಿಕ ಕ್ರೀಡಾ ಮೈದಾನಕ್ಕಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಎಸ್‌ಐಒ ಸಂಘಟನೆ ಸೋಮವಾರ ಮನವಿ ಸಲ್ಲಿಸಿತು. ಮಹಮ್ಮದ್ ಫಿರಾಸ್, ಶಮ್ನಾಸ್ ಇದ್ದರು. 
ಜಿಲ್ಲೆ

ಸಾರ್ವಜನಿಕ ಕ್ರೀಡಾ ಮೈದಾನಕ್ಕಾಗಿ ಮನವಿ

ಎಂ.ರವಿ

ಸಿದ್ದಾಪುರ: ಸಾರ್ವಜನಿಕ ಕ್ರೀಡಾ ಮೈದಾನಕ್ಕೆ ಒತ್ತಾಯಿಸಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಎಸ್‌ಐಒ ಸಂಘಟನೆ ಸೋಮವಾರ ಮನವಿ ಸಲ್ಲಿಸಿತು.

ಸಿದ್ದಾಪುರ ಭಾಗದ ಯುವಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರೀಡಾ ಚಟುವಟಿಕೆಗೆ ಅಗತ್ಯವಾದ ಒಂದೇ ಒಂದು ಕ್ರೀಡಾ ಮೈದಾನವಿಲ್ಲ. ಆರೋಗ್ಯಕರ ಯುವ ಸಮೂಹವನ್ನು ನಿರ್ಮಿಸುವ ಸಲುವಾಗಿ ಮೈದಾನದ ಅವಶ್ಯಕತೆ ಇದೆ. ಹಾಗಾಗಿ ಮೈದಾನಕ್ಕಾಗಿ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕ್ರೀಡಾ ಮೈದಾನಕ್ಕಾಗಿ ಕ್ರಮಕೈಗೊಳ್ಳಲು ಮುಂದಾಗುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಭರವಸೆ ನೀಡಿದರು. ಸಂಘಟನೆಯ ಮುಹಮ್ಮದ್‌ಫಿರಾಸ್ ಮತ್ತು ಶಮ್ನಾಸ್ ಇದ್ದರು.