ಜಿಲ್ಲೆ

ಅಳಿದ ಮೇಲೆ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ಮೈಸೂರು: ಕಲಾ ಸುರುಚಿ ಸಂಸ್ಥೆಯು ಡಾ.ಶಿವರಾಮ ಕಾರಂತ ಅವರ ಕಾದಂಬರಿ ಆಧಾರಿತ ಅಳಿದ ಮೇಲೆ ನಾಟಕ ಪ್ರದರ್ಶನವನ್ನು ಮೇ 11 ಮತ್ತು 12 ರಂದು ಆಯೋಜಿಸಿದೆ.

11 ರಂದು ಸಂಜೆ 6.30ಕ್ಕೆ ಕಿರುರಂಗಮಂದಿರದಲ್ಲಿ ಹಾಗೂ 12 ರಂದು ಸಂಜೆ 6.30ಕ್ಕೆ ರಾಮಕೃಷ್ಣನಗರದ ನಟನ ರಂಗಮಂದಿರದಲ್ಲಿ ಪ್ರದರ್ಶನ ನಡೆಯಲಿದೆ.

ಶಶಿಧರ ಡೋಂಗ್ರೆ ರಂಗರೂಪಕ್ಕೆ ತಂದಿರುವ ಈ ನಾಟಕವನ್ನು ಪ್ರೊ.ಎಚ್.ಎಸ್.ಉಮೇಶ್ ನಿರ್ದೇಶಿಸಿದ್ದಾರೆ. ಶಿವರಾಮಕಾರಂತರ ವಿಶಿಷ್ಟ ಕೃತಿ ಅಳಿದ ಮೇಲೆ. ಅವರ ಅಧ್ಯಯನ, ಚಿಂತನೆ, ರಚನಾ ಸಾಮರ್ಥ್ಯಕ್ಕೆ ಒಳ್ಳೆಯ ನಿದರ್ಶನ ಈ ಕಾದಂಬರಿಯು ಆಗಿದೆ.