ಜಿಲ್ಲೆ

ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಅಗತ್ಯ

ಮರಿದೇವ ಹೂಗಾರ

ಹುಬ್ಬಳ್ಳಿ: ಸ್ವಾತಂತ್ರೃ ದಿನ ನಿಮಿತ್ತ ಗೌತಮ ಬುದ್ಧ ಫೌಂಡೇಷನ್ ವತಿಯಿಂದ ಇಲ್ಲಿಯ ಅಕ್ಕಿಹೊಂಡದ ಸರ್ಕಾರಿ ಮಾದರಿ ಕನ್ನಡ ಹೆಣ್ಣುಮಕ್ಕಳ ಶಾಲೆ ನಂ. 05ರಲ್ಲಿ ರಸಪ್ರಶ್ನೆ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು.

ಫೌಂಡೇಷನ್ ಅಧ್ಯಕ್ಷ ಮಹಾಂತೇಶ ದೊಡ್ಡಮನಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಒದಗಿಸಬೇಕು. ಇದರಿಂದ ಮಕ್ಕಳಲ್ಲಿರುವ ಜ್ಞಾನ ಹೊರಹೊಮ್ಮಲಿದೆ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಿ ಯಶಸ್ಸು ಗಳಿಸಲಿದ್ದಾರೆ ಎಂದರು.

ಖಜಾಂಚಿ ಲಕ್ಷ್ಮಣ ನಾಗರಾಳ ಮಾತನಾಡಿ, ಮಕ್ಕಳನ್ನು ಸ್ಪರ್ಧಾ ಜಗತ್ತಿಗೆ ಕರೆ ತರಬೇಕು. ಇದರಿಂದ ಮುಂಬರುವ ಯಾವುದೇ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಜಯ ಗಳಿಸಲಿದ್ದಾರೆ. ಈ ನಿಟ್ಟಿನಲ್ಲಿ ಶಿಕ್ಷಕರಷ್ಟೇ ಅಲ್ಲ, ಪಾಲಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳೂ ಕೈಜೋಡಿಸಬೇಕು ಎಂದು ವಿನಂತಿಸಿದರು.

ನಂತರ ಗೆದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಫೌಂಡೇಷನ್ ಉಪಾಧ್ಯಕ್ಷ ಅಕ್ಷಯಕುಮಾರ ಅಮರಾಪುರ, ಪ್ರಧಾನ ಕಾರ್ಯದರ್ಶಿ ಆನಂದ ಮಸರಕಲ್, ಕಾರ್ಯದರ್ಶಿ ಜಗದೀಶ ಜಾಲಹಳ್ಳಿ, ಸದಸ್ಯರಾದ ಸಚಿನ್ ನಾಗರಾಳ, ಗುರುರಾಜ ಜಾಲಹಳ್ಳಿ, ಹುಲಗಪ್ಪ ಬೂದೂರ, ಶ್ರೀಧರ ದೊಡ್ಡಮನಿ, ಪುನೀತ ನಾಗರಾಳ, ಆನಂದ ಮಾದರ, ಗಿರೀಶ ಜಾಲಹಳ್ಳಿ, ಭಾಸ್ಕರ ಮಾದರ, ಪ್ರಭಾರಿ ಮುಖ್ಯಗುರುಮಾತೆ ಶೋಭಾ ಮ್ಯಾಗೇರಿ, ಶಿಕ್ಷಕ ಯಲ್ಲಪ್ಪ ಕರೆಣ್ಣವರ ಇತರರು ಇದ್ದರು.