ಕಾನಹೊಸಹಳ್ಳಿಯ ವೈಭವ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವೈಭವ ವಿದ್ಯಾಸಂಸ್ಥೆ ಮುಖ್ಯಸ್ಥ ಮುರಳಿಧರ್ ಗಜೇಂದ್ರಗಡ ಉದ್ಘಾಟಿಸಿದರು.ತಾಲೂಕು ನೌಕರ ಸಂಘದ ಅಧ್ಯಕ್ಷ ಶಿವರಾಜ ಪಾಲ್ತೂರು, ಗ್ರಾಪಂ ಅಧ್ಯಕ್ಷ ಎ.ಸಿ ಚೇತನ್, ನಿವೃತ್ತ ಶಿಕ್ಷಕ ಯು.ಜಗನ್ನಾಥ್ ಪ್ರಮುಖರಾದ ಸಿದ್ದರಾಧ್ಯ, ನಾಗೇಶ್, ಪ್ರಕಾಶಗೌಡ ಇದ್ದರು. 
ಜಿಲ್ಲೆ

ಮಕ್ಕಳಲ್ಲಿರುವ ಕಲೆ ಗುರುತಿಸಲು ವೇದಿಕೆ ಅಗತ್ಯ

ಕಾನಹೊಸಹಳ್ಳಿ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಅಭಿವ್ಯಕ್ತ ಪಡಿಸಲು ಪ್ರತಿಭಾ ಕಾರಂಜಿ ಸೂಕ್ತ ವೇದಿಕೆಯಾಗಿದೆ ಎಂದು ವೈಭವ ವಿದ್ಯಾಸಂಸ್ಥೆ ಮುಖ್ಯಸ್ಥ ಮುರಳಿಧರ ಗಜೇಂದ್ರಗಡ ಹೇಳಿದರು.


ಪಟ್ಟಣದ ವೈಭವ ಪ್ರೌಢಶಾಲಾ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಬೇಕು. ಜಾನಪದ ಕಲೆಗಳು ಅಧುನಿಕ ಭರಾಟೆಯ ನಡುವೆಯೂ ಇಂದಿಗೂ ಜೀವಂತಿಕೆ ಪಡೆದುಕೊಂಡಿವೆ. ಮಕ್ಕಳು ಜಾನಪದ ಕಲೆ ಕಲಿತು ಪ್ರದರ್ಶಿಸುವ ಆಸಕ್ತಿ ಬೆಳಸಿಕೊಳ್ಳಬೇಕು ಎಂದರು.


ತಾಲೂಕು ನೌಕರ ಸಂಘದ ಅಧ್ಯಕ್ಷ ಶಿವರಾಜ ಪಾಲ್ತೂರು ಮಾತನಾಡಿ, ಇಡೀ ತಾಲೂಕಿನ ಎಲ್ಲ ಕ್ಲಸ್ಟರ್ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸುತ್ತಿರುವ ಕಾರ್ಯ ಶ್ಲಾಘನೀಯ. ಶಿಕ್ಷಕರು ತಾರತಮ್ಯ ಮಾಡದೇ ಪ್ರತಿಭೆ ಗುರುತಿಸಿ ತಾಲೂಕು ಮಟ್ಟಕ್ಕೆ ಆಯ್ಕೆ ಮಾಡಬೇಕು ಎಂದು ತಿಳಿಸಿದರು.


ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ಹಿರೇಕುಂಬಗುಂಟೆ ಗ್ರಾಪಂ ಅಧ್ಯಕ್ಷೆ ಗಂಗಮ್ಮ, ನಿವೃತ್ತ ಶಿಕ್ಷಕ ಯು.ಜಗನ್ನಾಥ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ.ಸಿದ್ದರಾಧ್ಯ, ಗೌಡ್ರುಕೋಟ್ರೇಶ್, ಶಿವಾನಂದ, ಬಿಆರ್‌ಸಿ ರವೀಂದ್ರ, ಬಿಆರ್‌ಪಿ ನಾಗರಾಜ್, ಗ್ರಾಪಂ ಸದಸ್ಯ ನಾಗೇಶ್, ಗುಡೇಕೋಟೆ ಕಸಾಪ ಅಧ್ಯಕ್ಷ ಕೆ.ಎಚ್.ಎಂ ಚಂದ್ರಶೇಖರಯ್ಯ, ಇಂದು ಪಿಯು ಕಾಲೇಜ್ ಪ್ರಾಚಾರ್ಯ ಜಾತಪ್ಪ, ವೈಭವ ಪ್ರೌಢಶಾಲೆ ಮುಖ್ಯಶಿಕ್ಷಕ ಪ್ರಕಾಶ್‌ಗೌಡ, ಸಿಆರ್‌ಪಿ ಲೋಕೇಶ್, ಹೊಸತಿ ತಿಪ್ಪೇಸ್ವಾಮಿ ಇದ್ದರು.