ಜಿಲ್ಲೆ

ಔಷಧಿಗೆ ಜೀವ ತುಂಬುವ ಫಾರ್ಮಾಸಿಸ್ಟ್

ನರಗುಂದ: ಫಾರ್ಮಾಸಿಸ್ಟ್ ಗಳು ರೋಗಿಯ ಕಾಯಿಲೆಯನ್ನು ಗುರುತಿಸುವ ವೈದ್ಯರಷ್ಟೇ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಫಾರ್ಮಾಸಿಸ್ಟ್ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.

ಫಾರ್ಮಾಸಿಸ್ಟ್ ದಿನಾಚರಣೆ ಅಂಗವಾಗಿ ಪಟ್ಚಣದ ಬಾಬಾಸಾಹೇಬ ಭಾವೆ ಸರ್ಕಾರಿ ತಾಲೂಕಾಸ್ಪತ್ರೆ ಆವರಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೋಗಿಗಳ ವಿಶ್ವಾಸಾರ್ಹತೆ, ನಂಬಿಕೆಯ ಪ್ರತೀಕವೇ ಫಾರ್ಮಾಸಿಸ್ಟ್‌ಗಳು. ಅವರು ಔಷಧ ಸಂಶೋದನೆ, ಉತ್ಪಾದನೆ, ಸಂಗ್ರಹಣೆ, ಔಷಧ ವಿತರಣೆ, ಮಾರಾಟ ಮತ್ತು ಬೋಧನೆ ಸೇರಿದಂತೆ ವಿವಿಧ ವೃತ್ತಿಗಳಿಂದ ಜನರಿಗೆ ಹಾಗೂ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಚೇರಿ ಅಧೀಕ್ಷಕ ಪ್ರಶಾಂತ ಕುಲಕರ್ಣಿ ಮಾತನಾಡಿ, ಒಬ್ಬ ವೈದ್ಯ ಔಷಧ ಮೂಲಕ ರೋಗಿಗೆ ಜೀವ ತುಂಬಿದರೆ, ಆ ಔಷಧಿಗೆ ಒಬ್ಬ ಫಾರ್ಮಾಸಿಸ್ಟ್ ತನ್ನ ಜ್ಞಾನ, ಪರಿಣಿತಿ ಹಾಗು ಕೌಶಲದ ಮೂಲಕ ಔಷಧಿಗೆ ಜೀವ ತುಂಬುತ್ತಾನೆ. ನಿಸ್ವಾರ್ಥ ಮನೋಭಾವನೆಯಿಂದ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವುದೇ ಫಾರ್ಮಾಸಿಸ್ಟರ ಮುಖ್ಯ ಧೈಯವಾಗಿದೆ ಎಂದರು.

ಫಾರ್ಮಸಿ ಅಧಿಕಾರಿ ವಾಸಂತಿ ಕದಂ ಮಾತನಾಡಿದರು. ರಾಜೇಶ್ವರಿ ಪಿಳ್ಳೆ, ಕಿರಣ ಜೋಶಿ, ಮೌಲಾಸಾಬ ಠಾಣೇದ, ವಿಕ್ರಮ ಭೂಸರೆಡ್ಡಿ, ದ್ವಿತೀಯ ದರ್ಜೆ ಸಹಾಯಕ ಶಕೀಲ್ ಇತರರಿದ್ದರು.