ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ಸುರೇಶ್ ಅವರ ಮನೆ ಮುಂಭಾಗದ ಕೈ ತೋಟದಲ್ಲಿ ಬೆಳೆಯಲಾಗಿದ್ದ ಹಸಿ ಗಾಂಜಾ ಸಸಿಗಳನ್ನು ವಶಕ್ಕೆ ಪಡೆದ ಅಧಿಕಾರಿಗಳು. ಚೇತನಾ ಯಾದವ್, ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿ ಇದ್ದರು.  
ಜಿಲ್ಲೆ

ಕೈತೋಟದಲ್ಲಿ ಬೆಳೆದಿದ್ದ ಗಾಂಜಾ ಗಿಡ ವಶ

ಶ್ರೀರಂಗಪಟ್ಟಣ: ಮನೆಯ ಮುಂಭಾಗದ ಕೈತೋಟದಲ್ಲಿ ಅಕ್ರಮವಾಗಿ ಗಾಂಜ ಸಸಿಗಳನ್ನು ಬೆಳೆದಿದ್ದ ವ್ಯಕ್ತಿಯನ್ನು ಖಚಿತ ಮಾಹಿತಿ ಮೇರೆಗೆ ತಾಲೂಕು ಆಡಳಿತದ ನೇತೃತ್ವದಲ್ಲಿ ಫೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಶ್ರೀನಿವಾಸ ಅಗ್ರಹಾರ ಗ್ರಾಮದ ರಾಮೇಗೌಡ ಅವರ ಪುತ್ರ ಸುರೇಶ್(48) ಬಂಧಿತ ಆರೋಪಿ. ಈತ ಬೆಳೆದಿದ್ದ 10.5 ಕೆ.ಜಿ.ತೂಕದ ಹಸಿ ಗಾಂಜಾ ಸಸಿಗಳ ಸಮೇತ ವಶಕ್ಕೆ ಪೊಲೀಸರು ಪಡೆದಿದ್ದಾರೆ. ಸುರೇಶ್ ತನ್ನ ಮನೆಯ ಮುಂಭಾಗದ ಕೈತೋಟದಲ್ಲಿ ಟೊಮ್ಯಾಟೋ, ಮೆಣಸಿನ ಕಾಯಿ ಸೇರಿದಂತೆ ಕೆಲ ತರಕಾರಿ ಬಳ್ಳಿ ಬೆಳೆಸಿದ್ದು, ಇವುಗಳ ನಡುವೆ ಗಾಂಜಾ ಸಸಿಗಳನ್ನು ಸಹ ಯಾರ ಗಮನಕ್ಕೆ ತಿಳಿಯದಂತೆ ಮನೆಯ ಮೇಲ್ಭಾಗಕ್ಕೆ ಬಳ್ಳಿಯಂತೆ ಹಬ್ಬಿಸಿ ಬೆಳೆಸಿದ್ದ ಎಂದು ತಿಳಿದುಬಂದಿದೆ.

ಈ ವಿಚಾರ ದೊರೆತ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ಶಾಂತಮಲ್ಲಪ್ಪ ನಿರ್ದೇಶನದ ಮೇರೆಗೆ ಗ್ರಾಮಕ್ಕೆ ಬುಧವಾರ ಸಂಜೆ ತೆರಳಿದ ತಹಸೀಲ್ದಾರ್ ಚೇತನಾ ಯಾದವ್ ಹಾಗೂ ಟೌನ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಪಿಎಸ್‌ಐ ಜನಾಬಾಯಿ ಕಡಪಟ್ಟಿ ಹಾಗೂ ಸಿಬ್ಬಂದಿ ಸಿದ್ದರಾಜು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಮಾಲು ಸಮೇತ ಬಂಧಿಸಿದ್ದಾರೆ. ಇದೀಗ ಎನ್‌ಡಿಪಿಎಸ್ ಕಾಯ್ದೆಯಡಿ ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಮಂಜುನಾಥ್ ರಾವ್ ಇತರರು ಪಾಲ್ಗೊಂಡಿದ್ದರು.