ಜಿಲ್ಲೆ

ಮಲಗಿದ್ದವನ ಮೇಲೆ ಕುಸಿದ ಗೋಡೆ: ಕೂಲಿ ಕೆಲಸಕ್ಕೆ ಬಂದಿದ್ದ ಯುವಕನ ದಾರುಣ ಅಂತ್ಯ

ಕೆ.ಎನ್.ರಾಘವೇಂದ್ರ

ಮದ್ದೂರು: ತಾಲೂಕಿನ ಸೋಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಸಂಜೆ ಮಲಗಿದ್ದ ಯುವಕನ ಮೇಲೆ ಗೋಡೆ ಕುಸಿದು ಮೃತಪಟ್ಟಿದ್ದಾನೆ. ಗದಗ ಮೂಲದ ನಾಗರಾಜ್ (22) ಮೃತ. ಈತ ಗದಗ ಕೈಗಾರಿಕಾ ಪ್ರದೇಶದ ಕಾರ್ಖಾನೆಯಿಂದ ಮದ್ದೂರು ತಾಲೂಕಿನ ಸೋಮನಹಳ್ಳಿಯ ಕೈಗಾರಿಕಾ ಪ್ರದೇಶಕ್ಕೆ ಸರಕು ತಂದಿದ್ದ ಕ್ಯಾಂಟರ್‌ನಲ್ಲಿ ಕ್ಲೀನರ್ ಆಗಿ ಬಂದಿದ್ದ ಎನ್ನಲಾಗಿದೆ.
ವಾಹನದಿಂದ ಸರಕು ಇಳಿಸಿದ ನಂತರ ಕಾರ್ಖಾನೆಯ ಆವರಣದಲ್ಲೇ ಮಲಗಿದ್ದ ವೇಳೆ ಗೋಡೆ ಕುಸಿದಿದೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಶವ ರವಾನಿಸಲಾಗಿದ್ದು, ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.