ಜಿಲ್ಲೆ

ಗುಡ್ಡಕುಸಿತಕ್ಕೆ ಶಾಶ್ವತ ಪರಿಹಾರ

Avinash R

ಅನ್ಸಾರ್ ಇನೋಳಿ ಉಳ್ಳಾಲ ಮಳೆಗಾಲ ಬಂತೆಂದರೆ ಗುಡ್ಡ ಕುಸಿಯುವ ಸಮಸ್ಯೆ, ಸ್ಥಳೀಯ ಮನೆಗಳಿಗೂ ಆತಂಕ, ರಸ್ತೆಗೂ ಕಂಟಕ... ಇವೆಲ್ಲಕ್ಕೂ ಸಿಕ್ಕಿದೆ ಶಾಶ್ವತ ಪರಿಹಾರ... ಹಳೆಕೋಟೆಯಲ್ಲಿ ಕೋಟಿ ರೂ. ಖರ್ಚಿನಲ್ಲಿ ನಿರ್ವಾಣಗೊಂಡಿದೆ ತಡೆಗೋಡೆ. ಉಳ್ಳಾಲ ನಗರಸಭಾ ವ್ಯಾಪ್ತಿಯ ಹಳೆಕೋಟೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಸಮಸ್ಯೆ ಇತ್ತು. ಇದರ ಪರಿಣಾಮವಾಗಿ ಗುಡ್ಡದ ಸನಿಹದಲ್ಲಿದ್ದ ಮನೆಗಳು ವಾತ್ರವಲ್ಲದೆ ಮೇಲ್ಭಾಗದಲ್ಲಿರುವ ಮುಖ್ಯರಸ್ತೆ ಹಾಗೂ ಮನೆಗಳಿಗೂ ಅಪಾಯ ಎದುರಾಗಿತ್ತು. ತಡೆಗೋಡೆ ನಿರ್ವಾಣಕ್ಕೆ ಬೃಹತ್ ಅನುದಾನ ಬೇಕಿದ್ದ ಕಾರಣ ಕೆಲವು ಸಮಯಗಳ ಹಿಂದೆ ಶಾಸಕ ಯು.ಟಿ.ಖಾದರ್ ಅವರ ವಿಶೇಷ ನಿಧಿಯಿಂದ 50 ಲಕ್ಷ ರೂ. ಅನುದಾನದಲ್ಲಿ ಮೊದಲ ಹಂತದ ಕಾಮಗಾರಿ ನಡೆಸಲಾಗಿತ್ತು. ಆದರೆ ಸ್ಥಳೀಯರಲ್ಲಿ ಗುಡ್ಡ ಕುಸಿತದ ಭೀತಿ ಕಡಿಮೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಖಾದರ್ ಅವರು ಸ್ಪೀಕರ್ ಆದ ಆರಂಭದಲ್ಲೇ ಎರಡನೇ ಹಂತದ ಕಾಮಗಾರಿಗೆ ಅಲ್ಪಸಂಖ್ಯಾತ ಇಲಾಖೆಯ ಅನುದಾನದಲ್ಲಿ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಕಳೆದ ವರ್ಷ ಸೆಪ್ಟೆಂಬರ್ 8ರಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಗುಡ್ಡ ಕುಸಿತದ ಭೀತಿಯಿಂದ ಸ್ಥಳೀಯರು ಮುಕ್ತರಾಗಿದ್ದಾರೆ. ತಡೆಗೋಡೆ ದೊಡ್ಡ ಅನುದಾನಕ್ಕೆ ಖೇದ! ಹೆಚ್ಚಿನ ಕಡೆಗಳಲ್ಲಿ ಗುಡ್ಡ ತನ್ನಿಂತಾನೇ ಕುಸಿತದಂಥ ಸಮಸ್ಯೆಗೆ ಜನರೇ ಕಾರಣರಾಗುತ್ತಾರೆ. ಬಳಿಕ ಜನರಿಗೆ ಸಮಸ್ಯೆ ಸೃಷ್ಟಿಸುವುದರಿಂದ ಸರ್ಕಾರದ ಅನುದಾನ ಬಳಸುವ ಬಗ್ಗೆ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡುವ ಸಂದರ್ಭ ಸ್ಪೀಕರ್ ಯು.ಟಿ.ಖಾದರ್ ಅವರೇ ಖೇದ ವ್ಯಕ್ತಪಡಿಸಿದ್ದರು. ತಡೆಗೋಡೆಯಂತಹ ಸಮಸ್ಯೆಗಳು ಮನುಷ್ಯರೇ ಸೃಷ್ಟಿಸುವ ಸಮಸ್ಯೆಯೇ ಹೊರತು ತಾನಾಗಿಯೇ ಉದ್ಭವಿಸುವುದಿಲ್ಲ. ಮನೆ, ಇತರ ಕಟ್ಟಡ ನಿರ್ವಾಣ ಸಂದರ್ಭ ಇತರರ ಬಗ್ಗೆ ಕಾಳಜಿ ಅಗತ್ಯ. ಕೋಟಿ ರೂ. ಅನುದಾನ ಕೇವಲ ತಡೆಗೋಡೆಗೆ ಹಾಕುವ ಬದಲು ಕ್ಷೇತ್ರದ ಹಲವು ಕಾಮಗಾರಿಗಳನ್ನು ನಡೆಸಬಹುದು ಎಂದೂ ಗುಡ್ಡ ಕೊರೆದು ಮನೆ, ಇತರ ಕಾಮಗಾರಿ ನಡೆಸುವವರರಿಗೆ ಕಿವಿವಾತು ಹೇಳಿದ್ದರು.

ಹಳೆಕೋಟೆ ಭಾಗದಲ್ಲಿ ಸಾಕಷ್ಟು ಮನೆಗಳಿದ್ದು, ಅದೇ ಪ್ರವಾಣದಲ್ಲಿ ವಾಹನಗಳೂ ಇವೆ. ಇಲ್ಲಿನ ತಡೆಗೋಡೆ ಕುಸಿದ ಪರಿಣಾಮ ರಸ್ತೆ, ಮನೆಗಳಿಗೆ ಆತಂಕ ಎದುರಾಗಿತ್ತು. ಕಳೆದ ಬಾರಿ ಶಾಸಕರ ವಿಶೇಷ ಅನುದಾನ 50 ಲಕ್ಷ ರೂ. ಹಾಗೂ ಈ ಬಾರಿ ಅಲ್ಪಸಂಖ್ಯಾತ ಇಲಾಖೆಯಿಂದ 50 ಲಕ್ಷ ರೂ. ಅನುದಾನದಲ್ಲಿ ಸ್ಪೀಕರ್ ಮುತುವರ್ಜಿಯಲ್ಲಿ ಸ್ಮಾರ್ಟ್ ಸಿಟಿ ವಾದರಿಯ ಕೆಲಸ, ಮುತುವರ್ಜಿಯಿಂದ ತಡೆಗೋಡೆ ನಿರ್ವಾಣಗೊಂಡಿದೆ. - ಯು.ಪಿ.ಅಯೂಬ್ ಮಂಚಿಲ ಮಾಜಿ ಉಪಾಧ್ಯಕ್ಷರು, ಉಳ್ಳಾಲ ನಗರಸಭೆ ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಹಳೆಕೋಟೆ ಅತ್ಯಂತ ಜನನಿಬಿಡ ಪ್ರದೇಶ. ಈ ಭಾಗದ ರಸ್ತೆಬದಿ ಕುಸಿತಗೊಂಡಾಗ ಉಳ್ಳಾಲಕ್ಕೆ ಸಂಪರ್ಕ ಕಡಿತ ಭೀತಿ ಎದುರಾಗಿತ್ತು. ಈ ಬಗ್ಗೆ ಶಾಸಕ ಖಾದರ್ ಅವರ ಗಮನಕ್ಕೆ ತಂದಾಗ ತಕ್ಷಣ ಅನುದಾನ ನೀಡಿದ್ದು, ಎರಡು ಹಂತಗಳಲ್ಲಿ ತಡೆಗೋಡೆ ನಿರ್ಮಿಸಲು ತುರ್ತಾಗಿ ನೆರವು ನೀಡಿದ್ದಾರೆ. ಸ್ಥಳೀಯರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. - ಮೊಹಮ್ಮದ್ ತ್ವಾಹ, ಸ್ಥಳೀಯ ನಿವಾಸಿ