ಜಿಲ್ಲೆ

ಕಾಡಾನೆ ದಾಳಿಗೆ ಬೇಕಿದೆ ಶಾಶ್ವತ ಪರಿಹಾರ

ಜಿ.ಹೆಚ್. ಧನ್ಯಕುಮಾರ್

ಮೂಡಿಗೆರೆ: ತಾಲೂಕಿನಲ್ಲಿ ಭುವನೇಶ್ವರಿ, ಬೀಟಮ್ಮ 1ಮತ್ತು ಬೀಟಮ್ಮ 2 ಈ ಮೂರು

ಗುಂಪಿನ ಕಾಡಾನೆಗಳು ನಿರಂತರವಾಗಿ ಕಾಫಿ ತೋಟ, ಭತ್ತದ ಗದ್ದೆ, ಶುಂಠಿ ಗದ್ದೆಗಳಲ್ಲಿ

ನಿರಂತರ ದಾಳಿ ಮಾಡುತ್ತಿವೆ. ಕಾಡಾನೆ ಹಾವಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ

ಮಲೆನಾಡು ಭಾಗದ ಶಾಸಕರು ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕಿದೆ.

ಭಾನುವಾರ ಜನ್ನಾಪುರ ಪಟ್ಟಣದಲ್ಲಿ ಬೀಡುಬಿಟ್ಟಿದ್ದ 3 ಮರಿಗಳು ಸೇರಿ 14 ಕಾಡಾನೆಗಳ

ಗುಂಪು ಸಂಜೆ ಆಬ್ದಾರೆ ಮೂಲಕ ಸಾಗಿ ಮೂಡಿಗೆರೆ-ಸಕಲೇಶಪುರ ರಸ್ತೆ ದಾಟಿ ಜಿ.ಅಗ್ರಹಾರ

ಮತ್ತು ಜಿ.ಹೊಸಳ್ಳಿ ಗ್ರಾಮದಕಡೆ ತೆರಳಿದೆ. ಅದೇ ತಂಡದ ಮತ್ತೊಂದು ಗುಂಪು

ಚೇತನಹಳ್ಳಿ, ಕಲ್ಲುಗುಡ್ಡ, ಕಾರಬೈಲ್ ಭಾಗದಲ್ಲಿ ತಿರುಗಾಡುತ್ತಿದೆ. ಭುವನೇಶ್ವರಿ ತಂಡದ

ಕಾಡಾನೆಗಳು ಸೋಮವಾರ ರಾತ್ರಿ ಗಬ್ಬಳ್ಳಿ, ಕನ್ನಾಪುರ, ಸಂಗಮಾಪುರ, ಬೊಮ್ಮನಹಳ್ಳಿ,

ಚಟ್ಟನಹಳ್ಳಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದರೆ, ಮಂಗಳವಾರ ಮೂಡಸಸಿ, ಪುರ, ತುದಿಯಲ,

ಹುಲಿಹಂಡ್ಲು ಎಸ್ಟೇಟ್, ಕಲ್ಲುಗುಡ್ಡ, ಕಮ್ಮರಗೋಡು, ಚಂದ್ರಾಪುರ, ಬಾರದಹಳ್ಳಿ ಭಾಗದಲ್ಲಿ

ತಿರುಗಾಡುತ್ತಿದೆ.

ಎರಡು ಕಾಡಾನೆಗಳು ಜೇನುಬೈಲ್ ಗ್ರಾಮದ ಶಾಲೆ ಹಿಂಭಾಗದ ಆಟದ ಮೈದಾನದಲ್ಲಿ

ಸೋಮವಾರ ಕಾಣಿಸಿಕೊಂಡಿದೆ. ಅವುಗಳು ಉಗ್ಗೆಹಳ್ಳಿ, ಹಂತೂರು ಗ್ರಾಮಗಳಕಡೆ ತೆರಳಿದೆ.

ಇನ್ನೂ 2 ಕಾಡಾನೆಗಳು ಜಿ.ಹೊಸಳ್ಳಿ, ಟಾಟಾ ಎಸ್ಟೇಟ್, ಸಿಲ್ವರ್‌ಖಾನ್ ಎಸ್ಟೇಟ್, ಪಡಿಯ

ಕಾಲನಿ ವ್ಯಾಪ್ತಿಯ ಕಾಫಿ ತೋಟದಲ್ಲಿ ತಿರುಗಾಡುತ್ತಿದೆ. ಒಂಟಿ ಕಾಡಾನೆ ಸೋಮವಾರ

ರಾತ್ರಿ ಜಿ.ಹೊಸಳ್ಳಿಯಿಂದ ಹೇಮಾವತಿ ನದಿ ದಾಟಿ ದೋಣಗೋಡು, ಬೆಟ್ಟದ ಮನೆ,

ಉದುಸೆ ಗ್ರಾಮಗಳತ್ತ ಹೊರಟಿದೆ.