ಜಿಲ್ಲೆ

ಧರ್ಮ ಪ್ರಚಾರಕ್ಕಾಗಿ ಬಂದ ಪಾಕ್ ಕುಟುಂಬ

ಬೆಂಗಳೂರು ಗ್ರಾಮಾಂತರ ಡೆಸ್ಕ್

ಪಾಕಿಸ್ತಾನ, ಬಾಂಗ್ಲಾದಿಂದ ಓಡಿಸಿದ್ದ ಮುಸ್ಲಿಂ ಧರ್ಮಗುರುಗಳು ಹಿಂದುಗಳ ಹೆಸರಿನಲ್ಲಿ ಆಧಾರ್, ಪಾಸ್‌ಪೋರ್ಟ್, ಡಿಎಲ್ ಪತ್ತೆ

ವಿಜಯವಾಣಿ ಸುದ್ದಿಜಾಲ ಆನೇಕಲ್
ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ಹಿಂದು ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಜಿಗಣಿ ಸಮೀಪದ ರಾಜಾಪುರದಲ್ಲಿ ನೆಲೆಸಿದ್ದ ಪಾಕಿಸ್ತಾನದ ನಾಲ್ವರನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ರಾತ್ರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಸೋಮವಾರ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆ ಸಲುವಾಗಿ 10 ದಿನ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಮೂಲದ ರಹೀದ್ ಸಿದ್ಧಿಕಿ ಅಲಿಯಾಸ್ ಶಂಕರ ಶರ್ಮಾ, ಆಯೇಷಾ ಅಲಿಯಾಸ್ ಆಶಾ ಶರ್ಮಾ, ಮೊಹಮ್ಮದ್ ಹನ್ೀ ಅಲಿಯಾಸ್ ರಾಮ್ಬಾಬ ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಬಂಧಿತರು. ಪಾಕಿಸ್ತಾನದಲ್ಲಿ ಧರ್ಮ ಪ್ರಚಾರದ ವಿಚಾರಕ್ಕೆ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿ ಅಲ್ಲಿಂದ ಭಾರತಕ್ಕೆ ನುಸುಳಿ ಬಂದು ರಾಜಾಪುರ ಬಳಿಯ ಖಾಸಗಿ ಬಡಾವಣೆ ಇಡೀ ಕುಟುಂಬ ವಾಸವಾಗಿತ್ತು. ಈ ಬಗ್ಗೆ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿ ಮೇರೆಗೆ ನಾಲ್ವರನ್ನು ಬಂಧಿಸಲಾಗಿದೆ.


ರಶೀದ್ ಅಲಿ ಸಿದ್ಧಿಕಿ ಬೆಂಗಳೂರಿಗೆ ಬಂದ ನಂತರ ಶಂಕರ್ ಶರ್ಮಾ ಎಂಬ ಹೆಸರಲ್ಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದು, ರಾಜಾಪುರದ ಅಪ್ನಾ ಅಂಗನ್ ಲೇಔಟ್‌ನಲ್ಲಿ 6 ವರ್ಷಗಳಿಂದ ವಾಸವಾಗಿದ್ದರು. ಹಿಂದು ಹೆಸರು ಇಟ್ಟುಕೊಂಡು ಮುಸ್ಲಿಂ ಧರ್ಮದ ಬಗ್ಗೆ ಧಾರ್ಮಿಕ ಪ್ರಚಾರದಲ್ಲಿ ತೊಡಗಿಕೊಂಡಿರು. ರಶೀದ್ ಅಲಿ ಸಿದ್ದಿಕ್ ಮಾತ್ರವಲ್ಲದೆ ಆತನ ಬಾಂಗ್ಲಾದೇಶ ಮೂಲದ ಪತ್ನಿ ಹಾಗೂ ಪತ್ನಿಯ ತಂದೆ-ತಾಯಿ ಕೂಡ ಇಲ್ಲಿಗೆ ಬಂದು ಶರ್ಮಾ ಕುಟುಂಬವಾಗಿ ಗುರುತಿಸಿಕೊಂಡಿತ್ತು. ಫುಡ್ ಡೆಲಿವರಿ ಮಾಡುತ್ತಿದ್ದ ಈತ ಎಂಎ್ಐ ಧರ್ಮಗುರು ಬಗ್ಗೆ ಧಾರ್ಮಿಕ ಪ್ರಚಾರ ನಡೆಸುತ್ತಿದ್ದ ಎಂಬ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ಜಿಗಣಿ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ಭಾನುವಾರ ರಾತ್ರಿ ಆರೋಪಿ ಮನೆಯಲ್ಲಿ ಇದ್ದಾಗ ಬಂಧನ ಮಾಡಿದ್ದು, ಪ್ರಕರಣ ಗಂಭೀರವಾದ ಹಿನ್ನೆಲೆಯಲ್ಲಿ ಆರೋಪಿ ಹಾಗೂ ಪತ್ನಿಯನ್ನು ಸೋಮವಾರ ಬೆಳಗ್ಗೆಯವರೆಗೆ ಮನೆಯಲ್ಲಿಯೇ ಅಲ್ಲಿಯೇ ಇರಿಸಿ ತನಿಖೆ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಕೇಂದ್ರ ವಲಯ ಐಜಿಪಿ ಲಾಬೂ ರಾಮ್, ಜಿಗಣಿ ಠಾಣೆಗೆ ದೌಡಾಯಿಸಿ ಆರೋಪಿಗಳ ವಿಚಾರಣೆ ನಡೆಸಿದರು. ಆಧಾರ್ ಮತ್ತು ಪಾಸ್ ಪೋರ್ಟ್ ಸಹ ಪಡೆದಿದ್ದು, ಅಕ್ರಮ ದಾಖಲಾತಿ ಸೃಷ್ಟಿ ವಿಚಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಜೆವರೆಗೂ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರು ಮಧ್ಯಾಹ್ನ ಆನೇಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ 10 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದಾರೆ.

ಆನ್‌ಲೈನ್‌ನಲ್ಲಿ ನಿಖಾ
2011ರಲ್ಲಿ ಆನ್‌ಲೈನ್‌ನಲ್ಲಿ ಆಯಿಷಾಳನ್ನು ಮದುವೆ ಆಗಿರುವ ರಹೀದ್, ಪಾಕಿಸ್ತಾನದಲ್ಲಿ ಮುಸ್ಲಿಂ ಧರ್ಮಗುರುಗಳ ದೌರ್ಜನ್ಯ ಹೆಚ್ಚಾಗಿದ್ದರಿಂದ ಪಾಕ್ ತೊರೆದು ಬಾಂಗ್ಲಾದೇಶಕ್ಕೆ ನನ್ನ ಪತ್ನಿಯ ಬಳಿಗೆ ಹೋಗಿದ್ದ. ಅಲ್ಲಿ ಯೂನಸ್ ಅಲ್ ಗೊಹರ್ ಅವರ ಧಾರ್ಮಿಕ ಪ್ರವಚನ ಆಲಿಸುವಂತೆ ಜನರಿಗೆ ಪ್ರಚಾರ ಮಾಡುತ್ತಿದ್ದ. ಖರ್ಚು ವೆಚ್ಚಗಳನ್ನು ಮೆಹದಿ ಫೌಂಡೇಷನ್ ನೋಡಿಕೊಳ್ಳುತ್ತಿತ್ತು. ಮೆಹದಿ ಫೌಂಡೇಷನ್‌ನಲ್ಲಿ ಭಾರತ ಸೇರಿ ವಿಶ್ವದಾದ್ಯಂತ ಸದಸ್ಯರಿದ್ದಾರೆ. 3 ವರ್ಷಗಳ ಬಳಿಕ ಬಾಂಗ್ಲ್ಲಾಯೂ ಮುಸ್ಲಿಂ ಧರ್ಮ ಗುರುಗಳು ದಾಳಿ ಮಾಡಿದ್ದರಿಂದ ಮೆಹದಿ ಫೌಂಡೇಷನ್ ಭಾರತ ವಿಭಾಗದಿಂದ ಪರ್ವೇಜ್ ಎಂಬಾತನನ್ನು ದೂರವಾಣಿ ಸಂಪರ್ಕಿಸಿ ಭಾರತಕ್ಕೆ ಬಂದಿದ್ದ. ಧರ್ಮ ಪ್ರಚಾರ ಸಲುವಾಗಿ ಕುಟುಂಬ ಸಮೇತ ಭಾರತಕ್ಕೆ ಬಂದಿದ್ದ. ಮೊದಲು ದೆಹಲಿಗೆ ಬಂದು ಪರ್ವೇಜ್ ತೋರಿಸಿದ ಮನೆಯಲ್ಲಿ ವಾಸವಿದ್ದ. ಅಲ್ಲೇ ಆಧಾರ್ ಹಾಗೂ ಭಾರತೀಯ ಪಾಸ್ ಪೋರ್ಟ್, ಡಿಎಲ್, ಪಾನ್ ಕಾರ್ಡ್ ಮಾಡಿಸಿಕೊಂಡು 2018ರಲ್ಲಿ ಜಿಗಣಿ ಬಳಿ ಬಂದು ನೆಲೆಸಿದ್ದ. ಆಧಾರ್, ಬ್ಯಾಂಕ್ ಖಾತೆ ಪಾಸ್‌ಪೋರ್ಟ್ ಬೆಂಗಳೂರಿನ ವಿಳಾಸದಲ್ಲಿ ಪಡೆದಿದ್ದ.

ಸುಳಿವು ನೀಡಿದ ಗೋಡೆ ಬರಹ: ಪಾಕ್ ಪ್ರಜೆ ನೆಲೆಸಿದ್ದ ಮನೆಯ ಗೋಡೆಯಲ್ಲಿ ಮೆಹದಿ ಫೌಂಡೇಷನ್ ಇಂಟರ್ ನ್ಯಾಷನಲ್ ಎಂದು ಬರೆದಿದ್ದ ರಹೀದ್ ಸಿದ್ಧಿಕಿ, ಮುಸ್ಲಿಂ ಧರ್ಮ ಗುರುಗಳ ೆಟೋ ಮತ್ತು ಗೋಹರ್ ಸಾಹಿ ಹೆಸರಿನ ಮುಸ್ಲಿಂ ಧರ್ಮ ಗುರುವಿನ ಚಿತ್ರ ಹಾಕಿದ್ದ. ಈ ಬಗ್ಗೆ ಪ್ರಶ್ನಿಸಿದಾಗ ಪಾಕಿಸ್ತಾನದ ಕರಾಚಿ ಬಳಿಯ ಲಿಯಾಖತಾಬಾದ್ ಮೂಲದವನು ಎಂದು ಒಪ್ಪಿಕೊಂಡಿದ್ದಾನೆ.

ಪಾಕ್ ಸಂಪರ್ಕ ಬಿಟ್ಟಿಲ್ಲ>: ರಹೀದ್ ಸಿದ್ಧಿಕಿ ಬೆಂಗಳೂರಿಗೆ ಬಂದ ಮೇಲೆ ಪಾಕಿಸ್ತಾನದ ಕರೂಷಿಯಾ ಲಿಯಾಖತಾಬಾದ್‌ನಲ್ಲಿ ಇರುವ ತನ್ನ ಕುಟುಂಬಸ್ಥರಾದ ರಾಹತ್ ಅರೆ, ಓವೈಸ್‌ರಾಜ, ಬುಶ್ರ ಫಾತಿಮಾ, ಉಜಾಲಾ ಫಾತಿಮಾ ಅವರಿಗೆ ಕರೆ ಮಾಡಿ ಮಾತನಾಡುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗೃಹ ಬಂಧನ: ಆರೋಪಿ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಪತ್ನಿಯ ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ತಾಯಿಯನ್ನು ಮನೆಯಲ್ಲಿ ಬಂಧನಕ್ಕೆ ಒಳಪಡಿಸಲಾಗಿದೆ. ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅಲ್ಲದೆ, ರಾಜಾಪುರ ಬಳಿಯ ಖಾಸಗಿ ಲೇಔಟ್‌ನಲ್ಲಿ ಪಾಕಿಸ್ತಾನಿ ಕುಟುಂಬದ ಬಂಧನವಾದ ನಂತರ ಇಡೀ ಲೇಔಟ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೊನ್ನೆಯಷ್ಟೇ ಉಲ್ಫ ಶಂಕಿತ ಉಗ್ರ ಅರೆಸ್ಟ್ ಆಗಿದ್ದ. ಇದೀಗ ಪಾಕ್ ವ್ಯಕ್ತಿ ಅರೆಸ್ಟ್ ಆಗಿರುವುದು ನಗರ ಸುರಕ್ಷಿತವಾಗಿದೆಯಾ ಎಂಬ ಪ್ರಶ್ನೆ ಮೂಡಿಸಿದೆ.

ಜಿಗಣಿ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ ನಾಲ್ವರಿದ್ದ ಕುಟುಂಬವನ್ನು ಪೊಲೀಸರು ಬಂಧಿಸಿದ್ದಾರೆ. ಲಭ್ಯ ಮಾಹಿತಿ ಪ್ರಕಾರ ಈ ಕುಟುಂಬ ಹತ್ತು ವರ್ಷಗಳಿಂದ ಭಾರತದಲ್ಲಿದ್ದು, ಒಂದು ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದೆ. ಆರೋಪಿಗಳು ಆಧಾರ್ ಸಂಖ್ಯೆ ಮಾತ್ರವಲ್ಲ, ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಹಂತಕ್ಕೂ ಹೋಗಿದ್ದು, ತನಿಖೆ ಮುಂದುವರಿದಿದೆ. | ಡಾ.ಜಿ. ಪರಮೇಶ್ವರಗೃಹ ಸಚಿವ
ಇಂಡಿಯನ್ ಡಾಕ್ಯೂಮೆಂಟ್‌ಗಳನ್ನು ನಕಲಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರ ಆಧಾರದ ಮೇಲೆ ವಿಚಾರಣೆ ನಡೆಸಲಾಗುತ್ತಿದೆ, ವಿಚಾರಣೆ ಬಳಿಕ ಕಾನೂನು ಕ್ರಮ ಕೈಗೊಳ್ಳಲಾಗುವುದು, ಜಿಗಣಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ನಾಲ್ವರು ವಾಸವಿದ್ದರು, ಅವರೆಲ್ಲರೂ ಪಾಕ್ ಪ್ರಜೆಗಳಾ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ, ಡಾಕ್ಯೂಮೆಂಟ್ ಮಾಡಿಕೊಟ್ಟವರು ಯಾರು, ಎಲ್ಲಿಂದ ಮಾಡಿಸಿದರೂ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ.| ಲಾಬೂರಾಮ್, ಬೆಂಗಳೂರು ಕೇಂದ್ರ ವಲಯ ಐಜಿಪಿ