ಜಿಲ್ಲೆ

ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ದಶಪಥ ಹೆದ್ದಾರಿಗೆ ಒಳಚರಂಡಿ: ನಿತಿನ್​ ಗಡ್ಕರಿ

ಬೆಂಗಳೂರು: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ದಶಪಥ ಹೆದ್ದಾರಿಯಲ್ಲಿ ಒಳಚರಂಡಿ ವ್ಯವಸ್ಥೆಗೆ ಹೊಸ ಯೋಜನೆ ರೂಪಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್​ ಗಡ್ಕರಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು, ಸಂಸದರೊಂದಿಗೆ ಗುರುವಾರ ಬೆಂಗಳೂರಿನಲ್ಲಿ ಸಭೆ ನಡೆಸಿದ ನಿತಿನ್​ ಗಡ್ಕರಿ, ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ ವೇ ಕುಂದು-ಕೊರತೆಯನ್ನು ಸ್ವಯಪ್ರೇರಿತವಾಗಿ ಪ್ರಸ್ತಾಪಿಸಿದರು.

ದ್ದಾರಿಯಲ್ಲಿನ ಮಳೆನೀರು ಚರಂಡಿ ವ್ಯವಸ್ಥೆ ತೊಡಕುಗಳು ಹೊಸದಾಗಿ ಗೊತ್ತಾಗಿದೆ. ಎಲ್ಲೆಲ್ಲಿ ನೀರು ನಿಂತಿದೆ, ನಿಲ್ಲಬಹುದು ಎಂದು ತಿಳಿದುಕೊಂಡು ಒಳಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ಹೊಸ ಯೋಜನೆ ತಯಾರಿಸಲು ಸಲ್ಲಿಸಲು ಸಿಎಂಗೆ ಗಡ್ಕರಿ ಸೂಚಿಸಿದರು.

ಪ್ರಸ್ತಾವನೆ ಸಲ್ಲಿಕೆಯಾದ ಬಳಿಕ ಅನುಷ್ಠಾನವಾಗಲಿದೆ. ಸಂಪೂರ್ಣ ತಾಂತ್ರಿಕ ಯೋಜನೆ ಇದಾಗಲಿರುವ ಕಾರಣ ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಗಡ್ಕರಿ ತಿಳಿಸಿದರು.