ಬನಹಟ್ಟಿ ಪೊಲೀಸ್‌ಠಾಣೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಪಿಎಸ್‌ಐ ಶಾಂತಾ ಹಳ್ಳಿ, ರಾಜೇಂದ್ರ ಭದ್ರನ್ನವರ, ಸಂಜಯ ಜೋತಾವರ ಇದ್ದರು. 
ಜಿಲ್ಲೆ

ಹೊಸ ವಾಹನ ಕರ್ತವ್ಯಕ್ಕೆ ಅನುಕೂಲಕರ

Vijayapura - Desk - Gurappa Lokuri

ರಬಕವಿ/ಬನಹಟ್ಟಿ: ಬನಹಟ್ಟಿ ಪೊಲೀಸ್ ಠಾಣೆಗೆ ಹೊಸ ವಾಹನ ನೀಡಿದ ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಕಾರ್ಯಕ್ಕೆ ಸಂತಸ ತಂದಿದೆ ಎಂದು ಪಿಎಸ್‌ಐ ಶಾಂತಾ ಹಳ್ಳಿ ಹೇಳಿದರು.

ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾಹನ ಹಸ್ತಾಂತರ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ 20 ವರ್ಷಗಳಿಗೂ ಹೆಚ್ಚು ಕಾಲ ವಾಹನ ಸೇವೆಯಲ್ಲಿದ್ದು, ನಿಯಮದಡಿ ಗುಜರಿ ವಸ್ತುವಾಗಿತ್ತು. ಈ ವಾಹನ ಗಮನಿಸಿದ ಉಮಾಶ್ರೀ ಅವರು ತಮ್ಮ ಅನುದಾನದಲ್ಲಿ ಹೊಸ ವಾಹನ ನೀಡಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಸಿಪಿಐ ಸಂಜೀವ ಬಳಿಗಾರ ಮಾತನಾಡಿ, ನಮ್ಮ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸಲು ಬೇಕಾದ ಅಗತ್ಯ ಸೌಲಭ್ಯ ನೀಡಿ ಅನುಕೂಲ ಮಾಡಿದ್ದು ಸಂತಸದ ವಿಷಯ. ತೇರದಾಳ ಠಾಣೆಯ ವಾಹನವೂ ಹಳೆಯದ್ದಾಗಿದ್ದು, ಸರ್ಕಾರದ ಮಟ್ಟದಲ್ಲಿ ಯತ್ನಿಸಿ ನೆರವಾಗಲು ಮನವಿ ಮಾಡಿದರು.

ಶಾಸಕಿ ಉಮಾಶ್ರೀ ಮಾತನಾಡಿ, ಸಾಮಾಜಿಕ ದುಷ್ಟ ಶಕ್ತಿಗಳ ನಿಗ್ರಹ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಕಾರ್ಯಶ್ಲಾಘನೀಯ. ನಮ್ಮ ಸರ್ಕಾರ ಅಗತ್ಯ ಸೌಲಭ್ಯ ಕಲ್ಪಿಸಲು ಬದ್ಧವಾಗಿದೆ ಎಂದು ತಿಳಿಸಿದರು.

ರಾಜೇಂದ್ರ ಭದ್ರನ್ನವರ, ಚಿದಾನಂದ ಗಾಳಿ, ಸಂಜೀವ ಜೋತಾವರ, ಬಸವರಾಜ ಗುಡೋಡಗಿ, ರಾಹುಲ ಕಲಾಲ, ದಾನಪ್ಪ ಹುಲಜತ್ತಿ, ದುಂಡಪ್ಪ ಕರಿಗಾರ, ತೇರದಾಳ ಠಾಣಾಧಿಕಾರಿ ಅಪ್ಪು ಐಗಳಿ ಮತ್ತು ಎಲ್ಲ ಸಿಬ್ಬಂದಿ ಇದ್ದರು.