ಜಿಲ್ಲೆ

ಕೀಟನಾಶಕ ತಯಾರಿಸುತ್ತಿದ್ದ ಜಾಲ ಪತ್ತೆ

ಅರಸೀಕೆರೆ: ತಾಲೂಕಿನ ಮಾವುತನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಪರವಾನಗಿ ಇಲ್ಲದೆ ಕೀಟನಾಶಕಗಳನ್ನು (ಬಯೋಪ್ರಾಡಕ್ಟ್)ತಯಾರಿಸುತ್ತಿದ್ದ ಜಾಲವನ್ನು ಪತ್ತೆಹಚ್ಚುವಲ್ಲಿ ಜಿಲ್ಲಾ ಕೃಷಿ ಜಾಗೃತ ದಳದ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ.

ಕಲ್ಲಹಳ್ಳಿ ಗ್ರಾಮದ ಮಾರುತಿಸುತ(35)ಆರೋಪಿ. ಸಾರ್ವಜನಿಕರು ನೀಡಿದ ದೂರಿನ ಅನ್ವಯ ಜಿಲ್ಲಾ ಕೃಷಿ ಜಾಗೃತದಳದ ತೀರ್ಥಪ್ರಸಾದ್ ಹಾಗೂ ಡಿ.ಕೆ.ಯೋಗನಂದ ತಂಡ ಸೋಮವಾರ ಸಂಜೆ ದಾಳಿ ನಡೆಸಿ ಕೀಟನಾಶಕ ತಯಾರಿಸಲು ಉಪಯೋಗಿಸುತ್ತಿದ್ದ ಅಂದಾಜು 15ಲಕ್ಷ ರೂ.ಮೌಲ್ಯದ 1859 ಲೀ. ದ್ರಾವಣಗಳ ಬ್ಯಾರೆಲ್, ಬಾಟಲಿ ಹಾಗೂ ಲೇಬಲ್‌ಗಳನ್ನು ವಶಕ್ಕೆ ಪಡೆದಿದೆ. ಮಾವುತನಹಳ್ಳಿ ಗ್ರಾಮದ ಎಂ.ಎಸ್.ಸತ್ಯನಾರಾಯಣ ಎಂಬುವವರ ತೋಟದ ಮನೆಯಲ್ಲಿ ಕೃತ್ಯ ಎಸಗಲಾಗುತ್ತಿತ್ತು ಎಂದು ಹೇಳಲಾಗಿದೆ. ಜಾವಗಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಮಣ್ಯ, ಪ್ರಶಾಂತ್ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.