ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಗೆ ಭಕ್ತರಿಂದ ಭಾರೀ ಕಾಣಿಕೆ ಬಂದಿದೆ. ಎರಡೇ ತಿಂಗಳಲ್ಲಿ ಶ್ರೀಕಂಠೇಶ್ವರ ಸ್ವಾಮಿ ಹುಂಡಿಯಲ್ಲಿ 2 ಕೋಟಿ ರೂಪಾಯಿ ಸಂಗ್ರಹವಾಗಿದೆ.
ದೇವಸ್ಥಾನದ 25 ಹುಂಡಿಯಲ್ಲಿ 2,04,08,923 ಕೋಟಿ ರೂಪಾಯಿ ಸಂಗ್ರಹವಾಗಿದೆ. 120 ಚಿನ್ನ ಗ್ರಾಂ, 5 ಕೆಜಿ 600 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. 28,500 ರೂ. ಮೌಲ್ಯದ ನಿಷೇಧಿತ ನೋಟುಗಳನ್ನೂ ಕಾಣಿಕೆ ಹಾಕಿದ್ದಾರೆ. 1000 ರೂ. ಮುಖಬೆಲೆಯ 5 ನೋಟುಗಳು, 500 ರೂ. ಮುಖಬೆಲೆಯ 47 ನಿಷೇಧಿತ ನೋಟುಗಳು ಸಿಕ್ಕಿವೆ. 15 ವಿದೇಶಿ ಕರೆನ್ಸಿಯೂ ಹುಂಡಿಯಲ್ಲಿ ಸಂಗ್ರಹವಾಗಿದೆ.