ಜಿಲ್ಲೆ

ಎ.ಎನ್.ಜಾನಕೀರಾಂ, ಜಯಶೀಲಾ ಅವಿರೋಧ ಆಯ್ಕೆ

ರಾಜಣ್ಣ

ಕೆ.ಆರ್.ಪೇಟೆ: ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎ.ಎನ್.ಜಾನಕೀರಾಂ ಹಾಗೂ ಉಪಾಧ್ಯಕ್ಷರಾಗಿ ಜಯಶೀಲಾ ಅವಿರೋಧವಾಗಿ ಆಯ್ಕೆಯಾಗಿದರು.


ಕಳೆದ ವಾರ ಸಂಘದ ನೂತನ ಆಡಳಿತ ಮಂಡಳಿಗೆ ಎಲ್ಲ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಬುಧವಾರ ನಿಗದಿಯಾಗಿದ್ದ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆಯಲ್ಲಿ ಕ್ರಮವಾಗಿ ಎ.ಎನ್.ಜಾನಕೀರಾಂ ಹಾಗೂ ಜಯಶೀಲಾ ಹೊರತುಪಡಿಸಿ ಉಳಿದ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಿದರು.


ನಿರ್ದೇಶಕರಾದ ನವೀನಕುಮಾರ್, ಮಂಜೇಗೌಡ, ಮಹದೇವ್, ರಾಮೇಗೌಡ, ಕೃಷ್ಣೇಗೌಡ, ಅನಿಲಕುಮಾರ್, ಶ್ವೇತಾ, ಯೋಗೇಶ್, ಹಿರಿಯ ಮುಖಂಡ ಧರಣಿ ಶಿವನಂಜೇಗೌಡ, ಕೆ.ಸಿದ್ದೇಗೌಡ, ಎ.ಎಲ್.ನಂಜಪ್ಪ, ಎ.ಬಿ.ಲೋಕೇಶ್, ಎ.ಎನ್. ಯೋಗೇಶ್, ಎ.ಎಸ್.ಕುಮಾರ್, ಮುರುಳೀಧರ್, ಎ.ಎಸ್.ಗಣೇಶ್, ತೇಜಾ ಕುಮಾರ್, ಅಂಗಡಿ ರವಿಕುಮಾರ್, ಮಿಲ್ ನಾಗರಾಜು, ಎ.ಎಸ್.ಶ್ರೀಧರ್, ಕಾರ್ಯದರ್ಶಿ ಎ.ಎನ್.ಭಾರತಿ, ಸಹಾಯಕಿ ಯಶೋದಾ ಮತ್ತಿತರರು ಉಪಸ್ಥಿತರಿದ್ದರು.