ಜಿಲ್ಲೆ

ಮೈಸೂರು-ತಾಳಗುಪ್ಪ ಪ್ಯಾಸೆಂಜರ್​ ರೈಲು ಸಂಚಾರ ಜು.25ರಿಂದ ಪುನರಾರಂಭ

ಶಿವಮೊಗ್ಗ: ಕರೊನಾ ಎರಡನೇ ಅಲೆ ಸಂದರ್ಭ ಲಾಕ್​ಡೌನ್​ ಕಾರಣಕ್ಕೆ ಸ್ಥಗಿತಗೊಂಡಿದ್ದ ಮೈಸೂರು-ತಾಳಗುಪ್ಪ-ಮೈಸೂರು ಪ್ಯಾಸೆಂಜರ್​ ರೈಲು (16221/16222) ಜು.25ರಿಂದ ಮತ್ತೆ ಸಂಚಾರ ಆರಂಭಿಸಲಿದೆ.

ಮೈಸೂರಿನಿಂದ ಮಧ್ಯಾಹ್ನ 2 ಗಂಟೆಗೆ ಹೊರಡುವ ರೈಲು ರಾತ್ರಿ 11.30ಕ್ಕೆ ತಾಳಗುಪ್ಪ ತಲುಪಲಿದೆ. ಮರುದಿನ ಬೆಳಗ್ಗೆ 6.10ಕ್ಕೆ ತಾಳಗುಪ್ಪದಿಂದ ಹೊರಟು ಮಧ್ಯಾಹ್ನ 3.35ಕ್ಕೆ ಮೈಸೂರು ತಲುಪಲಿದೆ. ರೈಲಿನಲ್ಲಿ 12 ಬೋಗಿಗಳು ಇದ್ದು, ಈ ಪೈಕಿ ಸೆಕೆಂಡ್​ ಕ್ಲಾಸ್​ ಬೋಗಿಗಳು ಹತ್ತು, ಸೆಕೆಂಡ್​ ಕ್ಲಾಸ್​ ಲಗೇಜ್​ ಕಂ ಬ್ರೇಕ್​ ವ್ಯಾನ್​ ಎರಡು ಬೋಗಿಗಳು ಇರಲಿವೆ.

ಮೈಸೂರಿಂದ ತಾಳಗುಪ್ಪಕ್ಕೆ ರೈಲು ತಲುಪುವ ವೇಳಾಪಟ್ಟಿ

ಮೈಸೂರು- ಮಧ್ಯಾಹ್ನ 2ಕ್ಕೆ

ಹಾಸನ- ಸಂಜೆ 4.28

ಅರಸೀಕರೆ-ಸಂಜೆ 6.00

ಬೀರೂರು- ಸಂಜೆ 7.00

ತರೀಕೆರೆ- ಸಂಜೆ 7.39

ಭದ್ರಾವತಿ- ರಾತ್ರಿ 8.03

ಶಿವಮೊಗ್ಗ- ರಾತ್ರಿ 8.45

ಆನಂದಪುರ- ರಾತ್ರಿ 10.14

ಸಾಗರ- ರಾತ್ರಿ 10.44

ತಾಳಗುಪ್ಪ- ರಾತ್ರಿ 11.30

ತಾಳಗುಪ್ಪದಿಂದ ಮೈಸೂರಿಗೆ ರೈಲು ತೆರಳುವ ಸಮಯ

ತಾಳಗುಪ್ಪ- ಬೆಳಗ್ಗೆ 6.10

ಸಾಗರ- ಬೆಳಗ್ಗೆ 6.34

ಆನಂದಪುರ- ಬೆಳಗ್ಗೆ 7.06

ಶಿವಮೊಗ್ಗ- ಬೆಳಗ್ಗೆ 8.15

ಭದ್ರಾವತಿ- ಬೆಳಗ್ಗೆ 8.43

ತರೀಕೆರೆ- ಬೆಳಗ್ಗೆ 9.13

ಬೀರೂರು- ಬೆಳಗ್ಗೆ 10.03

ಕಡೂರು- ಬೆಳಗ್ಗೆ 10.15

ಅರಸೀಕೆರೆ- ಬೆಳಗ್ಗೆ 11.15

ಹಾಸನ- ಮಧ್ಯಾಹ್ನ 12.28

ಮೈಸೂರು- ಮಧ್ಯಾಹ್ನ 3.35