ಮೈಸೂರು: ಕೆರೆಗೆ ಹಾರಿ ಪೊಲೀಸ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ನಗರ ಶಸ್ತ್ರಾಸ್ತ್ರ ಮೀಸಲು ಪಡೆಯ ಪೇದೆ ಮೋಹನ್ ಎಂ. ಮೃತರು. 2008ನೇ ಬ್ಯಾಚ್ನ ಸಿಬ್ಬಂದಿಯಾದ ಮೋಹನ್, ಬಾಂಬ್ ಸ್ಕ್ವಾಡ್ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೈಸೂರು ತಾಲೂಕಿನ ವರುಣ ಕೆರೆ ಸಮೀಪ ಬೈಕ್ ನಿಲ್ಲಿಸಿ, ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.