ಮೈಸೂರು: ಮೈಸೂರಿನ ಫುಟ್‌ಬಾಲ್ ಆಟಗಾರ ಯಶವಂತ ಕುಮಾರ್(23) ಇಟಲಿಯ ರೋಮ್‌ನಲ್ಲಿ ದುರಂತ ಅಂತ್ಯ ಕಂಡಿದ್ದಾರೆ.
ಮೈಸೂರಿನ ಎನ್.ಆರ್. ಮೊಹಲ್ಲಾದ ಎನ್.ಕುಮಾರ್ ಹಾಗೂ ರೂಪಾ ದಂಪತಿಯ ಪುತ್ರ ಯಶವಂತ ಕುಮಾರ್, ವಿದ್ಯಾವರ್ಧಕ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ಸೀರೀ ಬಿ ಫುಟ್‌ಬಾಲ್ ಲೀಗ್ನಲ್ಲಿ ಭಾಗವಹಿಸಲು 4 ತಿಂಗಳ ಹಿಂದೆ ಕ್ಯಾಲ್ಸಿಯೊ ಸಿ 5 ತಂಡಗಳೊಂದಿಗೆ ರೋಮ್‌ಗೆ ಯಶವಂತ ಕುಮಾರ್ ರೋಮ್‌ಗೆ ತೆರಳಿದ್ದರು.
ಆ.6 ರಂದು ಯಶವಂತ ಕುಮಾರ್ ಅವರು ರೋಮ್ನ ಜಲಪಾತವೊಂದರಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ರೋಮ್ನ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜಲಪಾತದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದ್ದು, ಅಲ್ಲಿಯೇ ಅಂತ್ಯಕ್ರಿಯೆ ಮಾಡಲಾಗಿದೆ. ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ. ಯಶವಂತರ ಅಸ್ತಿ ನಿರೀಕ್ಷೆಯಲ್ಲಿ ಪೋಷಕರಿದ್ದಾರೆ. (ದಿಗ್ವಿಜಯ ನ್ಯೂಸ್)