ಜಿಲ್ಲೆ

ನಾಳೆಯಿಂದ ಮೈಸೂರಲ್ಲಿ ಅಂಬಾರಿ ಡಬಲ್​ ಡೆಕ್ಕರ್​ ಬಸ್​ ಸಂಚಾರ

arunakunigal

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸೆ.4ರಿಂದ ಅಂಬಾರಿ ಡಬಲ್​ ಡೆಕ್ಕರ್​ ಬಸ್​ ಸಂಚಾರ ಆರಂಭಿಸಲಿದ್ದು, ಓಪನ್​ ಟಾಪ್​ ವ್ಯವಸ್ಥೆ ಹೊಂದಿರುವ ಈ ಬಸ್​ನಲ್ಲೇ ಕುಳಿತು ಪ್ರವಾಸಿಗರು ಮೈಸೂರಿನ ಸೌಂದರ್ಯ ಸವಿಯಬಹುದು.

ಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ಈ ಬಸ್​ ಸಾರ್ವಜನಿಕರ ಸೇವೆಗೆ ಲಭ್ಯ ಇರಲಿದೆ. ತಲಾ ಒಬ್ಬರಿಗೆ ಪ್ರಯಾಣ ದರ 250 ರೂಪಾಯಿ. ಕರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದ ಅಂಬಾರಿ ಡಬಲ್​ ಡೆಕ್ಕರ್​ ಬಸ್​ ಸಂಚಾರವನ್ನು ಪ್ರವಾಸೋದ್ಯಮ ಅಬಿವೃದ್ಧಿ ನಿಟ್ಟಿನಲ್ಲಿ ಮತ್ತೆ ಆರಂಭಿಸಲಾಗಿದೆ. ಇನ್ನು ಕೆಲವೇ ದಿನದಲ್ಲಿ ಮೈಸೂರಲ್ಲಿ ದಸರಾ ಕಳೆಗಟ್ಟಲಿದ್ದು, ಪ್ರವಾಸಿಗರಿಗೆ ಈ ಬಸ್​ ಸೇವೆ ಅನುಕೂಲಕಾರಿ.

ಹೋಟೆಲ್​ ಮಯೂರ ಹೊಯ್ಸಳ, ಡಿಸಿ ಕಚೇರಿ, ಕುಕ್ಕರಹಳ್ಳಿ ಕೆರೆ, ಮೈಸೂರು ವಿವಿ, ರಾಮಸ್ವಾಮಿ ಸರ್ಕಲ್​, ಸಂಸ್ಕೃತ ಪಾಠಶಾಲೆ, ಕೆ.ಆರ್​.ಸರ್ಕಲ್​, ದೊಡ್ಡ ಗಡಿಯಾರ, ಅರಮನೆ ದಕ್ಷಿಣ ದ್ವಾರ, ಹಾರ್ಡಿಂಗ್​ ಸರ್ಕಲ್​, ಮೃಗಾಲಯ, ಕಾರಂಜಿ ಕೆರೆ, ಗೌರ್ಮೆಂಟ್​ ಗೆಸ್ಟ್​ ಹೌಸ್​, ಸಂತ ಫಿಲೋಮಿನಾ ಚರ್ಚ್​, ಬನ್ನಿ ಮಂಟಪ, ಆಯುರ್ವೇದಿಕ್​ ಆಸ್ಪತ್ರೆ ಸರ್ಕಲ್​, ರೈಲ್ವೆ ನಿಲ್ದಾಣ ಮಾರ್ಗದಲ್ಲಿ ಸಂಚರಿಸಿ ಮತ್ತೆ ಹೋಟೆಲ್​ ಮಯೂರ ಹೊಯ್ಸಳಕ್ಕೆ ಬಸ್​ ತಲುಪಲಿದೆ. ಬಸ್​ನಲ್ಲಿ ಪ್ರತಿ ಸ್ಥಳದ ಮಾಹಿತಿ ಆಡಿಯೋ-ವಿಡಿಯೋ ಸಿಸ್ಟಂನಿಂದ ಪ್ರಸಾರ ಆಗುತ್ತೆ.