ಮೈಸೂರು: ಎನ್.ಆರ್.ಮೊಹಲ್ಲಾ ಸಂಗೀತ ಸಭಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶ್ರೀ ತ್ಯಾಗರಾಜರ ಹಾಗೂ ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವದ ಅಂಗವಾಗಿ ಎನ್.ಆರ್.ಮೊಹಲ್ಲಾದ ಶ್ರೀ ಪ್ರಸನ್ನ ಮಹಾಗಣಪತಿ ದೇವಸ್ಥಾನದಲ್ಲಿ ಫೆ.16 ರಿಂದ 18 ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
16 ರಂದು ವಿದುಷಿ ಕೃತಿ ವಿಠಲ್ ಅವರು ಸಂಗೀತ ಕಛೇರಿ ನೀಡಲಿದ್ದು, ವಿದ್ವಾನ್ ಕೇಶವ್ ಮೋಹನ್‌ಕುಮಾರ್(ಪಿಟೀಲು), ವಿದ್ವಾನ್ ಎಚ್.ಎಲ್.ಶಿವಶಂಕರ ಸ್ವಾಮಿ(ಮೃದಂಗ), ವಿದ್ವಾನ್ ಶರತ್ ಕೌಶಿಕ್ (ಘಟಂ) ಸಾಥ್ ನೀಡಲಿದ್ದಾರೆ.
17 ರಂದು ವಿದ್ವಾನ್ ಸಂದೀಪ್ ನಾರಾಯಣ್ ಸಂಗೀತ ಕಾರ್ಯಕ್ರಮ ನೀಡಲಿದ್ದು, ವಿದ್ವಾನ್ ಬಿ.ಅನಂತ ಕೃಷ್ಣನ್(ಪಿಟೀಲು), ವಿದ್ವಾನ್ ತುಮಕೂರು ಬಿ.ರವಿಶಂಕರ್(ಮೃದಂಗ), ವಿದ್ವಾನ್ ಜಿ.ಎಸ್.ರಾಮಾನುಜನ್(ಘಟಂ) ಸಹಕಾರ ನೀಡಲಿದ್ದಾರೆ. 18 ರಂದು ಬೆಳಗ್ಗೆ 9 ಗಂಟೆಗೆ ನಾದಸ್ವರ ಮತ್ತು ಶ್ರೀ ತ್ಯಾಗರಾಜರ ಹಾಗೂ ಶ್ರೀ ಪುರಂದರದಾಸರ ಕೃತಿಗಳ ಗಾಯನ ಕಾರ್ಯಕ್ರಮ ನಡೆಯಲಿದೆ.