ಜಿಲ್ಲೆ

ಚಳಿಸುತ್ತಿದ್ದ ಕಾರಿಗೆ ಬೆಂಕಿ

Mangaluru - Shravan Kumar Nala

ಮಂಗಳೂರು: ಚಳಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಸಂಭವಿಸಿದೆ.

ಸಿಟಿ ಸೆಂಟರ್ ಸಮೀಪದ ರಸ್ತೆಯಲ್ಲಿ ಸ್ಥಳೀಯ ನಿವಾಸಿ ಮಹಿಳೆಯೋರ್ವರು ಹುಂಡೈ ಕಂಪೆನಿಯ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕಿಡಿಯಂತಹ ಬೆಂಕಿ ಕಾಣಿಸಿಕೊಂಡರೂ ಗಮನಕ್ಕೆ ಬಂದಿರಲಿಲ್ಲ. ಈ ವೇಳೆ ವಾಪಸ್ ಮನೆ ಸಮೀಪ ತಂದು ನಿಲ್ಲಿಸಿದ ಕೆಲವು ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರಲ್ಲಿ ಕಾರು ಭಾಗಶಃ ಸುಟ್ಟು ಹೋಗಿದೆ. ಪಾಂಡೇಶ್ವರ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದರು.

ಕಾರಿನ ಏರ್‌ಬ್ಯಾಗ್ ಸೇರಿದಂತೆ ಮುಂದಿನ ಭಾಗ ಸುಟ್ಟು ಹೋಗಿದೆ. ಬೆಂಕಿ ಕಾಣಿಸಿಕೊಂಡ ಕೂಡಲೇ ಚಾಲಕಿ ಕಾರಿನಿಂದ ಇಳಿದು ಬಂದಿದ್ದಾರೆ. ಶಾರ್ಟ್‌ಸರ್ಕ್ಯೂಟ್‌ನಿಂದ ಅಥವಾ ಬ್ಯಾಟರಿ ಭಾಗದಲ್ಲಿನ ದೋಷದಿಂದ ಬೆಂಕಿ ಉಂಟಾಗಿರಬಹುದೆಂದು ಹೇಳಲಾಗಿದೆ.