ರಾಮನಗರ: ಇನ್‌ಸ್ಟಾಗ್ರಾಂ ಮೂಲಕ ಬಾಲಕಿಯನ್ನು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಗಿ ಗರ್ಭಿಣಿ ಮಾಡಿ ನಾಪತ್ತೆಯಾಗಿದ್ದ ಯುವಕನನ್ನು ಮಾಗಡಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮೂಲದ ನರಸಿಂಹಮೂರ್ತಿ (25) ಬಂಧಿತ ಯುವಕ. ತುಮಕೂರಿನಲ್ಲಿ ಬಟ್ಟೆ ಅಂಗಡಿಯೊAದರಲ್ಲಿ ಕೆಲಸ ಮಾಡುತ್ತಿದ್ದ ಈತ , ನಕಲಿ ಇನ್ಸ್ಸ್ಟಾಗ್ರಾಂ ತೆಗೆದು ಮಾಗಡಿ ಮೂಲದ ಬಾಲಕಿಯನ್ನು ಪರಿಚಯ ಮಾಡಿಕೊಂಡು, ಪ್ರೀತಿಸುವ ನಾಟಕವಾಡಿದ್ದ. ಇದನ್ನು ಅಪ್ರಾಪ್ತೆ ನಂಬಿದ್ದಳು. ನಂತರ ಈಕೆಯನ್ನು ತುಮಕೂರಿನಲ್ಲಿರುವ ಸ್ನೇಹಿತನ ಕೊಠಡಿಗೆ ಕರೆದುಕೊಂಡು ಹೋಗಿ ಅಲ್ಲಿ ದೈಹಿಕ ಸಂಪರ್ಕವನ್ನು ಬೆಳೆಸಿ, ಕಳೆದ ಕೆಲವು ದಿನಗಳಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ.
ತಂದೆ ಇಲ್ಲದ ಬಡತನ ಕುಟುಂಬದಲ್ಲಿಯೇ ತಾಯಿಯೊಟ್ಟಿಗೆ ಇರುವ ಬಾಲಕಿಗೆ ಇತ್ತೀಚಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ವೈಧ್ಯರು ಸ್ಕಾÈನಿಂಗ್ ಮತ್ತು ರಕ್ತ ಪರೀಕ್ಷೆ ಮಾಡಿಸುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಬಾಲಕಿ ಗರ್ಭ ಧರಿಸಿರುವುದು ಗೊತ್ತಾಗಿದೆ. ಕುಟುಂಬ ಸದಸ್ಯರು ವಿಚಾರಣೆ ಮಾಡಿದಾಗ, ಇನ್ಸ್ಸ್ಟಾಗ್ರಾಂ ದೋಖಾ ಬೆಳಕಿಗೆ ಬಂದಿದೆ. ನಂತರ ಮಾಗಡಿ ಪೊಲೀಸ್ ಠಾಣೆಗೆ ಬಾಲಕಿ ಪಾಲಕರು ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಇನ್ಸ್ಸ್ಟಾ ಐಡಿಯ ಮೂಲ ಕೆದಕಿದಾಗ, ಆರೋಪಿ ಗುರುತು ಪತ್ತೆಯಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಆರೋಪಿ ಪತ್ತೆ ಆಗುತ್ತಿದ್ದಂತೆ ಮಾಗಡಿ ಪೊಲೀಸರು ಆರೋಪಿ ಹಿನ್ನೆಲೆ ಮತ್ತು ಮಾಗಡಿ ಬಾಲಕಿ ಮಾತ್ರವಲ್ಲದೆ ಮತ್ಯಾರಿಗಾದರೂ ವಂಚನೆ ಮಾಡಿದ್ದಾನೆಯೇ ಎನ್ನುವ ತನಿಖೆಯನ್ನು ಕೈಗೊಂಡಿದ್ದಾರೆ. ಈ ಸಂಬAಧ ತುಮಕೂರು ಪೊಲೀಸರ ಸಹಕಾರವನ್ನು ಸಹ ಕೋರಿದ್ದು, ತನಿಖೆ ಪ್ರಗತಿಯಲ್ಲಿದೆ.
ನಕಲಿ ಸಾಮಾಜಿಕ ಜಾಲ ತಾಣಗಳ ಮೂಲಕ ಅಪ್ರಾಪ್ತರು ಮತ್ತು ಹೆಣ್ಣು ಮಕ್ಕಳನ್ನೇ ಗುರಿಯಾಗಿಸಿಕೊಂಡು ಪ್ರೀತಿಯ ಬಲೆಯಲ್ಲಿ ಬೀಳಿಸುವ, ಇಲ್ಲವೇ ಆರ್ಥಿಕ ಅಪರಾಧಗಳನ್ನು ಮಾಡುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಪರಿಚಿತ ಖಾತೆ(ಐಡಿ)ಯಿಂದ ಸ್ನೇಹದ ವಿನಂತಿ ಬಂದರೆ ಪೂರ್ವಾಪರ ಗಮನ ಹರಿಸಬೇಕು. ಅನುಮಾನ ಕಂಡು ಬಂದರೆ ಅಂತಹ ಖಾತೆಗಳಿಂದ ದೂರ ಇದ್ದರೆ ಒಳಿತು ಇಲ್ಲವಾದರೆ ಖಂಡಿತವಾಗಿ ಮೋಸ ಹೋಗಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಮಾಗಡಿ ಠಾಣೆ ಸಿಪಿಐ ಗಿರಿರಾಜ್ ನೀಡಿದ್ದಾರೆ.