ಜಿಲ್ಲೆ

ಶಾಲೆಯಲ್ಲಿ ಅಳವಡಿಸಿದ್ದ ಕ್ಯಾಮರಾ ಕದ್ದೊಯ್ದ ಅಪ್ರಾಪ್ತ ಬಾಲಕ

Gadag - Desk - Tippanna Avadoot

ಮುಂಡಗೋಡ: ಪಟ್ಟಣದ ಪಿಎಂಶ್ರೀ ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಳವಡಿಸಲಾಗಿದ್ದ 8 ಸಿಸಿ ಕ್ಯಾಮರಾಗಳಲ್ಲಿ 2 ಕ್ಯಾಮರಾ ಕಳ್ಳತನವಾದ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಶಾಲೆಯ ಸುರಕ್ಷತೆಯ ದೃಷ್ಟಿಯಿಂದ ಕಳೆದ 2 ತಿಂಗಳ ಹಿಂದೆ ಶಾಲೆಯ ಆವರಣದಲ್ಲಿ 8 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಶುಕ್ರವಾರ ಮಧ್ಯಾಹ್ನ ಅಪ್ರಾಪ್ತ ಬಾಲಕನೊಬ್ಬ ಶಾಲೆಯ ಕಚೇರಿಯ ಪಕ್ಕದಲ್ಲೇ ಅಳವಡಿಸಿದ್ದ 2 ಸಿಸಿ ಕ್ಯಾಮರಾಗಳನ್ನು ಕಿತ್ತುಕೊಂಡು ಹೋಗಿದ್ದಾನೆ. ಅಲ್ಲದೆ, ಕಿತ್ತುಕೊಂಡು ಹೋಗಿದ್ದ 2 ಸಿಸಿ ಕ್ಯಾಮರಾದಲ್ಲಿ ಒಂದನ್ನು ಶಾಲೆಯ ಆವರಣದಲ್ಲಿ ಶನಿವಾರ ಬೆಳಗ್ಗೆ ಇಟ್ಟಿ ಹೋಗಿದ್ದಾನೆ. ಈ ಎಲ್ಲ ದುಷ್ಕತ್ಯದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಮುಖ್ಯೋಪಾಧ್ಯಾಯ ವಿನೋದ ನಾಯಕ, ಶನಿವಾರ ಶಾಲೆಗೆ ಆಗಮಿಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಸಿಸಿ ಕ್ಯಾಮರಾ ಕಳ್ಳತನವಾಗಿರುವ ಕುರಿತು ಇಲ್ಲಿನ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

 ಕಡಿವಾಣ ಹಾಕಿ:  ಶಾಸಕರ ಮಾದರಿ ಶಾಲೆಯಲ್ಲಿ ಕಳೆದ ವರ್ಷ ದುಷ್ಕರ್ವಿುಗಳು ಕೊಠಡಿಯ ಬಾಗಿಲು ಮುರಿದು ಪುಸ್ತಕ ಹಾಗೂ ಹಾಜರಾತಿ ಪುಸ್ತಕ ತೆಗೆದುಕೊಂಡು ಹೋಗಿದ್ದರು. ಅಲ್ಲದೆ, ಶಾಲೆಯ ಆವರಣದಲ್ಲಿ ಕ್ರಿಕೆಟ್ ಆಡುವ ನೆಪದಲ್ಲಿ ಕೆಲವರು ಅನೈತಿಕ ಚಟುವಟಿಕೆ ನಡೆಸುತ್ತಿರುವ ಮಾತುಗಳು ಕೇಳಿಬರುತ್ತಿವೆ.