ಬೆಂಗಳೂರು: ಅರಮನೆ ಮೈದಾನದ ಗಾಯತ್ರಿ ವಿಹಾರ್ನಲ್ಲಿ ನಡೆಯುತ್ತಿರುವ ‘ಪೀಠೋಪಕರಣ ಮತ್ತು ಒಳಾಂಗಣ ವಿನ್ಯಾಸ ಉಪಕರಣಗಳ ಮೇಳ’ಕ್ಕೆ ಸೋಮವಾರ ಸಚಿವ ಬಿ.ಸಿ ಪಾಟೀಲ್ ಅವರು ಕುಟುಂಬ ಸಮೇತ ಆಗಮಿಸಿದರು.
ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗ ಹಾಗೂ ಯುನಿಲೆಟ್ ಸಹಭಾಗಿತ್ವದಲ್ಲಿ ಈ ಮೇಳ ನಡೆಯುತ್ತಿದ್ದು, ಕೊನೇ ದಿನವಾದ ಸೋಮವಾರ ಸಚಿವರು ಎಕ್ಸ್ಪೋ ಆಗಮಿಸಿ ಸೋಫಾ, ಫರ್ನೀಚರ್ಸ್, ಇಂಟೀರಿಯಲ್ ಡಿಸೈನ್ ವೀಕ್ಷಿಸಿದರು. ಅಪಾರ ಸಂಖ್ಯೆಯಲ್ಲಿ ಗ್ರಾಹಕರೂ ಕುಟುಂಬಸಮೇತ ಆಗಮಿಸಿ ಫರ್ನೀಚರ್ ಮೇಳದಲ್ಲಿ ದೇಸಿ ಉದ್ಯಮಗಳ ತಾಕತ್ತನ್ನು ಕಣ್ತುಂಬಿಕೊಂಡರು.