ಸಿದ್ದಾಪುರ: ತಾಲೂಕಿನ ವಾಜಗದ್ದೆ ಸಹಿಪ್ರಾ ಶಾಲೆಯಲ್ಲಿ ಶಿಕ್ಷಣ ಇಲಾಖೆ, ದುರ್ಗಾವಿನಾಯಕ ದೇವಸ್ಥಾನ ಆಡಳಿತ ಮಂಡಳಿ, ದುರ್ಗಾವಿನಾಯಕ ಕೃಷಿಕ ಯುವಕ ಸಂಘ ವಾಜಗದ್ದೆ ಆಶ್ರಯದಲ್ಲಿ ಹಾರ್ಸಿಕಟ್ಟಾ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ನಡೆಯಿತು.
<p>ವಾಜಗದ್ದೆಯ ದುರ್ಗಾವಿನಾಯಕ ದೇವಸ್ಥಾನದ ಮೊಕ್ತೇಸರ ಶ್ರೀಧರ ಎಂಹೆಗಡೆ ಹಾಗೂ ಹಾರ್ಸಿಕಟ್ಟಾ ಗ್ರಾಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ವಿದ್ಯಾರ್ಥಿಗಳಿಂದ ಜರುಗಿದ ಡೊಳ್ಳುಕುಣಿತ ಜನರ ಮೆಚ್ಚುಗೆ ಗಳಿಸಿತು. ಕಲಿಕಾ ಹಬ್ಬದಲ್ಲಿ ಏಳು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಗ್ರಾಪಂ ಅಧ್ಯಕ್ಷೆ ಹನುಮಕ್ಕ ಭೋವಿ, ಎಸ್ಡಿಎಂಸಿ ಅಧ್ಯಕ್ಷ ಪ್ರಸನ್ನ ಹೆಗಡೆ ಹೊಸಗದ್ದೆ, ಶಾಲಾ ಮುಖ್ಯಾಧ್ಯಾಪಕ ಕೆ.ಎನ್. ಹೆಗಡೆ, ನಿವೃತ್ತ ಶಿಕ್ಷಕ ಡಿ.ಎಲ್. ಭಾಗ್ವತ್, ಶಿಕ್ಷಕ ಎಸ್.ಎಚ್. ನಾಯ್ಕ, ಇತರರಿದ್ದರು.
ಬಿಇಒ ಎಂ.ಎಚ್. ನಾಯ್ಕ ಕಲಿಕಾ ಹಬ್ಬಕ್ಕೆ ಭೇಟಿ ನೀಡಿ ಕಾರ್ಯಕ್ರಮದ ಕುರಿತು ಪ್ರಶಂಸಿಸಿದರು.
ಶಿಕ್ಷಣ ಸಂಯೋಜಕ ಚೈತನ್ಯಕುಮಾರ, ಮಂಜುನಾಥ ಶಾಸ್ತ್ರಿ, ಬಿಆರ್ಪಿ ಮಂಜುನಾಥ ಚಂದಾವರ, ಇತರರಿದ್ದರು.
ಸಿಆರ್ಪಿ ಶೋಭಾ ಡಿ.ಸಿ., ಶಿಕ್ಷಕಿ ಸುಷ್ಮಾ ಹಾಗೂ ಶಿಕ್ಷಕ ವಿನಾಯಕ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.