ಚಿಕ್ಕಮಗಳೂರು ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಚಾರ್ಟರ್ಡ್ ಅಕೌಂಟೆಂಟ್ ಶ್ರೇಯಸ್ ಮಾತನಾಡಿದರು. 
ಜಿಲ್ಲೆ

ಸರಕು ಸೇವಾ ತೆರಿಗೆ ಅರಿವು ಮೂಡಿಸಲು ಸಭೆ

ಚಿಕ್ಕಮಗಳೂರು: ಸರಕು ಸೇವಾ ತೆರಿಗೆ ಮತ್ತು ಆದಾಯ ತೆರಿಗೆ ಬಗ್ಗೆ ಮಾರಾಟಗಾರರಲ್ಲಿ ಅರಿವು ಮೂಡಿಸಲು ಮಾ.೨೩ ರಂದು ಮಧ್ಯಾಹ್ನ ೩.೪೫ಕ್ಕೆ ಚಿಕ್ಕಮಗಳೂರಿನ ಬ್ರಹ್ಮಸಮುದ್ರ ರಂಗಣ್ಣನವರ ಛತ್ರದಲ್ಲಿ ಸಭೆ ಕರೆಯಲಾಗಿದೆ ಎಂದು ಚಾರ್ಟೆಡ್ ಅಕೌಂಟೆಂಟ್ ಶ್ರೇಯಸ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಲೆಕ್ಕಿಗರ ಮತ್ತು ಲೆಕ್ಕ ಪರಿಶೋಧಕರ ಸಂಘ ಹಾಗೂ ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಈ ಸಭೆ ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ವೇಣು ಮತ್ತು ವಿನಯ್ ಚಾರ್ಟೆಡ್ ಅಕೌಂಟೆಂಟ್ ಸಂಸ್ಥಾಪಕ ವೇಣುಗೋಪಾಲ್.ಜಿ ಹಾಗೂ ಇದೇ ಸಂಸ್ಥೆ ಜಿಲ್ಲಾ ಪಾಲುದಾರ ಶ್ರೇಯಸ್ ಸರಕು-ಸೇವಾ ತೆರಿಗೆ ಮತ್ತು ಆದಾಯ ತೆರಿಗೆ ಕುರಿತು ಸಮಗ್ರ ಮಾಹಿತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಕಾರ್ಯಕ್ರಮವನ್ನು ಮೊದಲು ಜಿಲ್ಲಾ ಮಟ್ಟದಲ್ಲಿ ಆಯೋಜನೆ ಮಾಡಲಾಗಿದ್ದು, ಇದರ ಯಶಸ್ವಿ ನಂತರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹಾಗೂ ರಾಜ್ಯಮಟ್ಟದಲ್ಲಿ ಆಯೋಜನೆ ಮಾಡಲು ಉದ್ದೇಶಿಸಲಾಗಿದೆ. ಗ್ರಾಹಕರು ಮತ್ತು ಎಲ್ಲ ರೀತಿಯ ಮಾರಾಟಗಾರರು ಈ ಕಾರ್ಯಕ್ರಮದ ಸದುಪಯೋಗಪಡೆದುಕೊಳ್ಳಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸಭೆಯ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ೮೦೭೩೦೨೧೯೮೭, ೯೮೮೬೬೬೫೫೬೧, ೯೦೩೬೭೫೮೮೩೯, ೭೯೭೫೨೨೬೭೧೭ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಅಧ್ಯಕ್ಷ ಮಾಗಿಮಿರಾಜ್, ಉಪಾಧ್ಯಕ್ಷ ಜಾವಿದ್ ಅಕ್ತರ್, ಕಾರ್ಯದರ್ಶಿ ಅಬ್ದುಲ್ ಶವೂರ್ ಉಪಸ್ಥಿತರಿದ್ದರು.