ಜಿಲ್ಲೆ

ಲಾಡ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ

ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ಲಿಂಗಾಯತ ಮುಖಂಡರ ಸಭೆ ಇಲ್ಲಿನ ಮಯೂರ ರೆಸಾರ್ಟ್ನಲ್ಲಿ ಗುರುವಾರ ನಡೆಯಿತು. ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತಗಳ ಸಂಖ್ಯೆ ಹೆಚ್ಚಾಗಿದ್ದು, ಅಭ್ಯರ್ಥಿ ಗೆಲುವಿನಲ್ಲಿ ನಿಣÁðಯಕ ಪಾತ್ರ ವಹಿಸಲಿವೆ. ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಬೆಳವಣಿಗೆಯ ಬೆನ್ನಲ್ಲೇ ಲಿಂಗಾಯತ ಮುಖಂಡರ ಸಭೆ ನಡೆಸಿರುವ ಲಾಡ್, ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ, ಬಾಪುಗೌಡ ಪಾಟೀಲ, ಅನಿಲಕುಮಾರ ಪಾಟೀಲ, ಸದಾನಂದ ಡಂಗನವರ, ಶಿವಲೀಲಾ ಕುಲಕರ್ಣಿ, ವೀರಣ್ಣ ಮತ್ತಿಕಟ್ಟಿ, ವಿಜಯ ಕುಲಕರ್ಣಿ, ಪಿ.ಸಿ. ಸಿದ್ದನಗೌಡರ, ಎಂ.ಎಸ್. ಅಕ್ಕಿ, ಮೋಹನ ಲಿಂಬಿಕಾಯಿ, ಶರಣಪ್ಪ ಕೊಟಗಿ, ಇತರರಿದ್ದರು.