ಜಿಲ್ಲೆ

ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಾಪತ್ತೆ

Dakshina Kannada

ಪಡುಬಿದ್ರಿ: ಎರಡೂವರೆ ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಶಿಪಾಶೇಖ್(25) ಹಾಗೂ ರಿಯಾಜ್(28) ಎಂಬುವರು ನಂದಿಕೂರು-ಅಡ್ವೆಯ ಮನೆಯಿಂದ ಆ.1ರಂದು ಉಡುಪಿಗೆ ಮೊಬೈಲ್ ಖರೀದಿಸಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಯಾಜ್ ಮಣಿಪಾಲದ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದರು. ಶಿಪಾಶೇಖ್ ತಂದೆ ತಾಯಿ ಮೃತಪಟ್ಟಿದ್ದು, ಬಿಎಎಂಎಸ್ ಕಡೆಯ ವರ್ಷದಲ್ಲಿ ಕಲಿಯುತ್ತಿದ್ದ ಈಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ರಿಯಾಜ್ ಅವರನ್ನು ವಿವಾಹವಾಗಿದ್ದರು. ಇತ್ತೀಚೆಗಷ್ಟೇ ಶಿವಮೊಗ್ಗಕ್ಕೆ ಸಂಬಂಧಿಕರ ಮನೆಗೆ ಹೋಗಿದ್ದಾಗ ಎರಡೂವರೆ ತಿಂಗಳ ಅವರ ಮಗುವೂ ತೀರಿಕೊಂಡಿತ್ತು. ರಿಯಾಜ್ ಮೊಬೈಲ್ ಸ್ವಿಚ್ ಆ್ ಆಗಿದ್ದು ಶಿಪಾ ಮೊಬೈಲ್ ಅನ್ನು ಮನೆಯಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.