ಜಿಲ್ಲೆ

ಮಾರ್ಕೋನಹಳ್ಳಿ ಜಲಾಶಯ ಭರ್ತಿ: ಶಿಂಷಾ ನದಿ ಪಾತ್ರದ ಜನರಿಗೆ ಕಟ್ಟೆಚ್ಚರ

arunakunigal

ತುಮಕೂರು: ಜಿಲ್ಲೆಯೆಲ್ಲೆಡೆ ಭರ್ಜರಿ ಮಳೆ ಸುರಿಯುತ್ತಿದ್ದು, ಕುಣಿಗಲ್​ ತಾಲೂಕು ಮಾರ್ಕೋನಹಳ್ಳಿ ಜಲಾಶಯ ಭರ್ತಿಯಾಗಿದೆ.

ಈ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಕೆಳಭಾಗದ ಶಿಂಷಾ ನದಿಯ ಆಸುಪಾಸಿನಲ್ಲಿರುವ ಜನ-ಜಾನುವಾರುಗಳಿಗೆ ಅಪಾಯವಾಗದಂತೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಾಗೃತಿ ಮೂಡಿಸಲು ಕಂದಾಯ ಇಲಾಖೆಗೆ ಕಾವೇರಿ ನೀರಾವರಿ ನಿಗಮ ಸೂಚಿಸಿದೆ. ಪೂರ್ವ ಮುಂಗಾರಿನಲ್ಲಿಯೇ ಮಳೆಯ ಆರ್ಭಟ ಜೋರಾಗಿದ್ದು, ಈ ವರ್ಷವೂ ಕೆರೆ-ಕಟ್ಟೆ ಭರ್ತಿಯಾಗುವ ಆಶಾಭಾವನೆ ಮೂಡಿದೆ.