ಜಿಲ್ಲೆ

ಅಗಾಧ ಜ್ಞಾಪಶಕ್ತಿಯ ಮಣಿಕಂಠ

ಮರಿದೇವ ಹೂಗಾರ

ಹುಬ್ಬಳ್ಳಿ: ವಾಹನಗಳು, ಪ್ರಾಣಿ ಮತ್ತು ಪಕ್ಷಿಗಳ ಹೆಸರು, ಅಂಕಿ-ಸಂಖ್ಯೆ ಹೇಳುವುದರಲ್ಲಿ ಹುಬ್ಬಳ್ಳಿಯ ಈ ಪುಟಾಣಿ ಮಣಿಕಂಠ ಕೂಡಗಿ ಎತ್ತಿದ ಕೈ. ಹೀಗಾಗಿಯೇ 16ನೇ ತಿಂಗಳ ಈ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮುಡಿಗೇರಿಸಿಕೊಂಡಿದ್ದಾನೆ.

ಇಲ್ಲಿನ ಮಧುರಾ ಎಸ್ಟೇಟ್​ನ ಈರಣ್ಣ ಕೂಡಗಿ ಮತ್ತು ಅನ್ನಪೂರ್ಣ ಕೂಡಗಿ ಅವರ ಪುತ್ರ ಮಣಿಕಂಠ. ಚಿಕ್ಕ ವಯಸ್ಸಿನಲ್ಲಿಯೇ ಮಾತು ಕಲಿತಿರುವ ಈ ಪ್ರತಿಭೆ, ಬರುಬರುತ್ತ ಪ್ರಾಣಿ-ಪಕ್ಷಿಗಳ ಹೆಸರು ಹೇಳಲು ಶುರು ಮಾಡಿದ. ನಂತರ ಆಂಗ್ಲ ಭಾಷೆಯ ವರ್ಣಮಾಲೆಗಳನ್ನು ಜೋಡಿಸುವುದು ಕಲಿತ. ಅಗಾಧ ಜ್ಞಾಪಕ ಶಕ್ತಿ ಹೊಂದಿರುವುದನ್ನು ನೋಡಿ ಬಹಳಷ್ಟು ಜನರು ಅಚ್ಚರಿಪಟ್ಟಿದ್ದಾರೆ. ಈ ಬಾಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪಡೆದಿರುವುದು ಕೇಳಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ನಿಬ್ಬೆರಗಾಗಿದ್ದಾರೆ.