ಮಂಡ್ಯ: ಮಹಾಮಾರಿ ಕರೊನಾ ಸೋಂಕಿನಿಂದ ಮೃತಪಟ್ಟ ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ(MDCDO) ಕಾರ್ಯಕಾರಿ ಮಂಡಳಿ ಸದಸ್ಯ, ವರುಣ್ ಮೆಡಿಕೆಲ್ಸ್ ಬಿಂಡಿಗನವಿಲೇ ಮಾಲೀಕ ಕೆ.ಎನ್ ದೇವರಾಜು ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಚೆಕ್ ನೀಡಲಾಯಿತು.
ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆ ಕಚೇರಿಯಲ್ಲಿ ಮ್ಯಾನ್ ಕೈಂಡ್ ಫಾರ್ಮ ಲಿ.(MANKIND) ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕೆ.ಎನ್.ದೇವರಾಜು ಅವರ ಮಗ ವರುಣ್ಗೆ ಮ್ಯಾನ್ ಕೈಂಡ್ ಸಂಸ್ಥೆ ಮುಖ್ಯಸ್ಥರಾದ ಮನೀಶ್ ಹೆರೋರ, ಸಿದ್ದಲಿಂಗೇಶ, ಪಂಕಜ್ ಅವರು ಪರಿಹಾರ ಹಣದ ಚೆಕ್ ಅನ್ನು ವಿತರಿಸಿದರು.
ಸಂಸ್ಥೆ ಅಧ್ಯಕ್ಷ ಬಿ.ಲೋಕೇಶ್ ಮಾತನಾಡಿ, ಕರೊನಾ ಸಂಕಷ್ಟ ಕಾಲದಲ್ಲೂ ಪ್ರಾಣದ ಹಂಗನ್ನೇ ತೊರೆದು ಔಷಧ ವ್ಯಾಪಾರಿಗಳು ಹಗಲು-ರಾತ್ರಿ ಎನ್ನದೆ ಸೇವೆ ಸಲ್ಲಿಸಿದ್ದಾರೆ. ಅಂತಹ ಸಂದರ್ಭದಲ್ಲಿ ಅದೆಷ್ಟೋ ಔಷಧ ವ್ಯಾಪಾರಿಗಳು ಕರೊನಾಗೆ ಬಲಿಯಾಗಿದ್ದು ನೋವಿನ ಸಂಗತಿ. ಇಂತಹ ಪರಿಸ್ಥಿತಿಯನ್ನು ಮನಗೊಂಡ ಮ್ಯಾನ್ಕೈಂಡ್ ಸಂಸ್ಥೆಯು ಜಿಲ್ಲಾ ಔಷಧ ವ್ಯಾಪಾರಿಗಳ ಹಾಗೂ ವಿತರಕರ ಸಂಸ್ಥೆಯ ಮನವಿ ಮೇರೆಗೆ ದೇವರಾಜ್ ಕುಟುಂಬಕ್ಕೆ 3 ಲಕ್ಷ ರೂ. ಪರಿಹಾರದ ಹಣ ನೀಡಿ ನೊಂದವರಿಗೆ ಆಸರೆಯಾಗಿದೆ ಎಂದರು. ಸಂಸ್ಥೆಯ ಪ್ರಭಾಕರನ್, ರಾಜಶೇಖರ್, ಮುನಿಸಿದ್ದೇಗೌಡ, ಮಹೇಶ್, ಕೃಷ್ಣೇಗೌಡ , ನಂಜೇಗೌಡ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.