Oplus_16777216 
ಜಿಲ್ಲೆ

ಚಾಕುವಿನಿಂದ ಇರಿದು ಒಬ್ಬನ ಕೊಲೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಖಾನಾಪುರ: ಪಟ್ಟಣದ ಗಾಂಧಿ ನಗರದ ಮಾರುತಿ ದೇವಸ್ಥಾನದಲ್ಲಿ ಚಾಕುವಿನಿಂದ ಇರಿದು ಓರ್ವನನ್ನು ಕೊಲೆ ಮಾಡಿದ ಟನೆ ಭಾನುವಾರ ನಡೆದಿದೆ. ಗಾಂಧಿನಗರ ನಗರದ ಸುರೇಶ ಅಲಿಯಾಸ್​ ರಮೇಶ ತಿಮಣ್ಣ ಬಂಡಿವಡ್ಡರ (32) ಕೊಲೆಗೀಡಾದವ. ಪ್ರಕರಣ ಸಂಬಂಧ ಯಲ್ಲಪ್ಪ ಶಾಂತಾರಾಮ ಬಂಡಿವಡ್ಡರ (60), ಯಶವಂತ ಅಲಿಯಾಸ್​ ಅನಿಲ ಯಲ್ಲಪ್ಪ ಬಂಡಿವಡ್ಡರ (25), ಸಾವಿತ್ರಿ ಯಲ್ಲಪ್ಪ ಬಂಡಿವಡ್ಡರ (55), ಮೃತನ ಪತ್ನಿ ಸ್ನೇಹಾ ಸುರೇಶ ಬಂಡಿವಡ್ಡರ (27) ವಿರುದ್ಧ ಪ್ರಕರಣ ದಾಖಲಾಗಿದೆ.

ಮೃತ ಸುರೇಶನ ಪತ್ನಿ ಸ್ನೇಹಾ ಮತ್ತು ಯಶವಂತ ಅನೈತಿಕ ಸಂಬಂಧ ಹೊಂದಿದ್ದರು. ಯಶವಂತ ಕೂಡ ವಿವಾಹಿತ. ಆದರೂ ಇಬ್ಬರು ಮೂರ್ನಾಲ್ಕು ದಿನಗಳ ಹಿಂದೆ ಓಡಿಹೋಗಿದ್ದರು. ಸುರೇಶ ಶನಿವಾರ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಓಡಿಹೋಗಿದ್ದ ಇಬ್ಬರೂ ಭಾನುವಾರ ಮನೆಗೆ ಬಂದಿದ್ದರು. ಈ ಹಿನ್ನೆಲೆ ಪಂಚಮ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಎರಡೂ ಕುಟುಂಬ ಸದಸ್ಯರ ಮಧ್ಯೆ ಜಗಳ ಆರಂಭವಾಗಿದೆ. ಈ ಸಂದರ್ಭದಲ್ಲಿ ಯಶವಂತನ ತಂದೆ ಯಲ್ಲಪ್ಪ ಸುರೇಶನ ಕುತ್ತಿಗೆ ಮತ್ತು ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆಂದು ಪ್ರಕರಣ ದಾಖಲಿಸಿಕೊಂಡಿರುವ ಖಾನಾಪುರ ಠಾಣೆ ಪೊಲೀಸರು ತಿಳಿಸಿದ್ದಾರೆ. ಟನೆಯಲ್ಲಿ ಸಾಗರ್​ ಅಷ್ಟೇಕರಗೆ ಗಾಯಗಳಾಗಿವೆ. ಪ್ರಮುಖ ಆರೋಪಿ ಯಲ್ಲಪ್ಪ ಬಂಡಿವಡ್ಡರ ಪೊಲೀಸರಿಗೆ ಶರಣಾಗಿದ್ದು, ತನಿಖೆ ಮುಂದುವರಿದಿದೆ.