ಶಿವಮೊಗ್ಗ: ಸಾಗರ ರಸ್ತೆಯ ಶಕ್ತಿಧಾಮ ಲೇಔಟ್‌ನ ಖಾಲಿ ಜಾಗದಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು 28 ಸಾವಿರ ರೂ. ಮೌಲ್ಯದ 680 ಗ್ರಾಂ ಒಣ ಗಾಂಜಾ ಮತ್ತು 1,050 ರೂ. ನಗದು ಜಪ್ತಿ ಮಾಡಿದ್ದಾರೆ.
ಚೋರಡಿಯ ಮರಾಠ ಕ್ಯಾಂಪ್ ನಿವಾಸಿ ನಾಗರಾಜ್ (38) ಬಂಧಿತ. ಈತ ಸಾರ್ವಜನಿಕರಿಗೆ ಗಾಂಜಾ ಮಾರುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಉಪ ವಿಭಾಗ-2ರ ಡಿವೈಎಸ್ಪಿ ಸುರೇಶ್ ನೇತೃತ್ವದಲ್ಲಿ ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ, ಪಿಎಸ್‌ಐ ಕುಮಾರ್ ಕೂರಗುಂದ ಹಾಗೂ ಸಿಬ್ಬಂದಿ ತಂಡವು ಕಾರ್ಯಾಚರಣೆ ನಡೆಸಿ ನಾಗರಾಜ್‌ನನ್ನು ಬಂಧಿಸಿದೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.