ಬೆಂಗಳೂರು: ಇಲ್ಲೋರ್ವ ತನ್ನ ಚಿಕ್ಕಮ್ಮನ ಮನೆಗೆ ಹೋಗಿ ಮಾಡಬಾರದ ಪಾಪಕೃತ್ಯ ಮಾಡಿ ಈಗ ಪೊಲೀಸರಿಂದ ಬಂಧಿತನಾಗಿದ್ದಾನೆ.
ವಿಜಯ್ ಎಂಬಾತ ಬನ್ನೇರುಘಟ್ಟಾದಲ್ಲಿರುವ ಚಿಕ್ಕಮ್ಮನ ಮನೆಗೆ ಕುಡಿದು ಹೋಗಿದ್ದ. ಊಟವಾಗುತ್ತಲೇ ಚಿಕ್ಕಮ್ಮ ಯಶೋಧಾ ಮಲಗಲು ಹೋಗಿದ್ದಾರೆ. ಆದರೆ ವಿಜಯ್ ಚಿಕ್ಕಮ್ಮನ ಬಳಿ ಹೋಗಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯಿಸಿದ್ದಾನೆ.
ಆದರೆ ಯಶೋಧಾ(43) ಒಪ್ಪದಿದ್ದಾಗ ಅವರ ಕತ್ತಿನ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಸದ್ಯ ಬನ್ನೇರುಘಟ್ಟ ಪೊಲೀಸರು ವಿಜಯ್ನನ್ನು ಬಂಧಿಸಿದ್ದಾರೆ.