ಜಿಲ್ಲೆ

ಜೀವನದಲ್ಲಿ ಜುಗುಪ್ಸೆಗೊಂಡ ಯುವಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ; ಹಾವೇರಿಯಲ್ಲಿ ದುರ್ಘಟನೆ

mcbhadrashetti

ಹಾವೇರಿ:  ಜೀವನದಲ್ಲಿ ಜುಗುಪ್ಸೆಗೊಂಡು ಯುವಕನೊರ್ವ ಬೆಂಕಿಹಚ್ಚಿಕೊಂಡು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ರಾಣೇಬೆನ್ನೂರ ತಾಲ್ಲೂಕಿನ ಯರೇಕುಪ್ಪಿ ಗ್ರಾಮದಲ್ಲಿ ಬೆಳಗಿನ ಜಾವ ಈ ಆತ್ಮಹತ್ಯೆ ಆಗಿದೆ. ದೇವರಾಜ ಜಗದೇವಪ್ಪ ಹಾದಿಮನಿ (29) ಮೃತ ದುರ್ದೈವಿಯಾಗಿದ್ದಾನೆ.

ಮೃತನು ಸುಮಾರು 3-4 ವರ್ಷಗಳಿಂದ ಯಾವುದೋ ವಿಷಯದಲ್ಲಿ  ಮಾನಸಿಕ ಮಾಡಿಕೊಂಡು ಸದಾ ಒಂಟಿಯಾಗಿರುತ್ತಿದ್ದನಂತೆ. ಹೀಗಾಗಿ ಇಂದು  ಬೆಳಗಿನ 7:30 ರ ಸುಮಾರಿಗೆ ಯುವಕ ತನ್ನ ವಾಸವಿದ್ದ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆಂದು ಮೃತನ ತಂದೆ ದೂರು ನೀಡಿದ್ದಾರೆ.

ಈ ಸಂಬಂಧ ಹಲಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.