ಧಾರವಾಡ: ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಗಾಂಜಾ ಮಾದಕ ವಸ್ತು ಸಾಗಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಬಂಽಸಿದ್ದಾರೆ. ಸಿಸಿಬಿ ಪ್ರಭಾರ ಎಸಿಪಿ ಬಲ್ಲಪ್ಪ ನಂದಗಾAವಿ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಅಲಿ ಎ. ಶೇಖ್ ಹಾಗೂ ಸಿಬ್ಬಂದಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎತ್ತಿನಗುಡ್ಡದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಽಸಿದ್ದಾರೆ. ಆತನಿಂದ ೧,೦೦೭ ಗ್ರಾಂ ಗಾಂಜಾ, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಜಪ್ತಿ ಮಾಡಿದ್ದಾರೆ. ಬಂಽತ ವ್ಯಕ್ತಿ ಗಾಂಜಾವನ್ನು ಫಂಡರಪುರದಿAದ ತಂದು ಮಾರಾಟ ಮಾಡಲು ಯತ್ನಿಸಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಕುರಿತು ಹುಬ್ಬಳ್ಳಿ- ಧಾರವಾಡ ಸಿಇಎನ್ ಕ್ರೆÊಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣವನ್ನು ಪತ್ತೆಗೆ ವಿಶೇಷ ಕರ್ತವ್ಯ ನಿರ್ವಹಿಸಿದ ಸಿಸಿಬಿಯ ಅಽಕಾರಿ ಹಾಗೂ ಸಿಬ್ಬಂದಿಯನ್ನು ಪೊಲೀಸ್ ಆಯುಕ್ತೆ ರೇಣುಕಾ ಕೆ. ಸುಕುಮಾರ ಪ್ರಶಂಶಿಸಿದ್ದಾರೆ.