ಜಿಲ್ಲೆ

ಅಂಬೇಡ್ಕರ್ ಭಾವಚಿತ್ರದ ಮುಂದೆ ಮದ್ವೆಯಾದ ಪ್ರೇಮಿಗಳು

ಆನೇಕಲ್: ಸಂವಿಧಾನ ಶಿಲ್ಪಿ ಡಾ. ಬಿ.ಆರ್​.ಅಂಬೇಡ್ಕರ್ ಅವರ ಭಾವಚಿತ್ರದ ಮುಂದೆ ಪ್ರೇಮಿಗಳು ಮದುವೆಯಾದರು.

ಆನೇಕಲ್ ತಾಲೂಕಿನ ಬಳ್ಳೂರು ಗ್ರಾಮದ ಯುವಕ ವಿರೇಶ್ ಮತ್ತು ಬಾಗಲಕೋಟೆ ಮೂಲದ ಅನುಪಮಾ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಹತ್ತು ವರ್ಷದಿಂದ ಅನುಪಮಾ ಕುಟುಂಬಸ್ಥರು ಎಲೆಕ್ಟ್ರಾನಿಕ್ ಸಿಟಿಯಲ್ಲಿ ವಾಸವಿದ್ದಾರೆ. ಆಗರ ಪಿಯು ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುವಾಗ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಪಿಯು ಮುಗಿದ ಬಳಿಕ ವಿರೇಶ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ. ಅನುಪಮಾ, ಪಿಯುಸಿ ಮುಗಿಸಿ ಮನೆಯಲ್ಲಿಯೇ ಇದ್ದಳು.

ಆದರೆ ಇವರ ಪ್ರೀತಿಗೆ ಎರಡೂ ಕುಟುಂಬಸ್ಥರಿಂದಲೂ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಆನೇಕಲ್ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಮುಖಂಡರುಗಳ ಸಮ್ಮುಖದಲ್ಲಿ ಬೌದ್ಧ ಧರ್ಮದ ಸಂಪ್ರದಾಯದಂತೆ ವಿವಾಹವಾದರು. ಯುವಕ-ಯುವತಿಯ ಸ್ನೇಹಿತರು ಹಾಗೂ ಯುವಕನ ಅಕ್ಕ-ಬಾವ ಉಪಸ್ಥಿತರಿದ್ದರು.