ಕನಕಪುರ: ತಾಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ ಒಂಟಿ ಆನೆ ಮಂಗಳವಾರ ಬೆಳಗ್ಗೆ ದಾಳಿ ಮಾಡಿ ಬೆಳೆ ನಾಶ ಪಡಿಸಿದೆ.
ಗ್ರಾಮದ ಈರೇಗೌಡ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಸೀಮೆಹುಲ್ಲು, ರಾಗಿ ಫಸಲನ್ನು ನಾಶಪಡಿಸಿದೆ, ಅಲ್ಲದೇ ಕೋಳಿ ಸಾಕಣೆ ಮನೆಯನ್ನು ಕೆಡವಿ, ಬೇಲಿ ಕಂಬಗಳನ್ನು ಹಾನಿಮಾಡಿದೆ. ಕಾಡಾನೆ ದಾಳಿಯಿಂದ ತೀವ್ರ ತೊಂದರೆಯಾಗಿದೆ, ಸರ್ಕಾರ ಆನೆ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ರವಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿದರು.