* ಪೊಲೀಸರಿಗೆ ಶರಣಾದ ರೈತ
ಮಾಗಡಿ: ಬೆಳೆ ರಕ್ಷಣೆಗೆಂದು ಅಳವಡಿಸಿದ್ದ ತಂತಿಯಿಂದ ವಿದ್ಯುತ್ ಸ್ಪರ್ಶಿಸಿ ಚಿರತೆ ಸಿಲುಕಿ ಮೃತಪಟ್ಟಿದ್ದು, ಘಟನೆಯಿಂದ ಭಯಗೊಂಡ ರೈತ ಜಮೀನಿನಲ್ಲೆ ಕಲೇಬರ ಹೂತುಹಾಕಿ ಪೊಲೀಸರಿಗೆ ಶರಣಾಗಿದ್ದಾನೆ.
ತಾಲೂಕಿನ ಮರಲಗೊಂಡಲ ಗ್ರಾಮದ ನಿವಾಸಿ ಉಮೇಶ್ (46) ಜಮೀನಿನಲ್ಲಿ ಗೆಣಸುಬೆಳೆದಿದ್ದು, ಕಾಡು ಹಂದಿಗಳು ಬೆಳೆ ನಾಶ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬೆಳೆ ಸುತ್ತ ಅಳವಡಿಸಿದ ವಿದ್ಯುತ್ ತಂತಿಗೆ ಶನಿವಾರ ರಾತ್ರಿ 4 ವರ್ಷದ ಚಿರತೆ ಮೃತಪಟ್ಟಿದೆ. ಇದರಿಂದ ಭಯಗೊಂಡ ರೈತ, ಮೃತ ಚಿರತೆಯನ್ನು ಜಮೀನಿನಲ್ಲಿ ಗುಂಡಿ ತೋಡಿ ಮುಚ್ಚಿ ಭಾನುವಾರ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ.
ಪೊಲೀಸರು ಅರಣ್ಯಾಧಿಕಾರಿಗಳಿಗೆ ವಿಷಯ ಮುಟ್ಟಿಸಿ ಉಮೇಶನನ್ನು ಒಪ್ಪಿಸಿದ್ದಾರೆ. ಆರ್ಎಫ್ ಚೈತ್ರಾ, ಡಿಆರ್ಎಫ್ ಶೋಭಾ ಸ್ಥಳ ಪರಿಶೀಲಿಸಿ, ಚಿರತೆ ಕಳೇಬರ ಹೊರತೆಗೆದು ಮರಣೊತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.