ನೆಲಮಂಗಲದ ಬಿಜೆಪಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ್​ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಮಹಿಳಾಮೋರ್ಚಾ ರಾಜ್ಯಾಧ್ಯೆ ಮಂಜುಳಾ ಪುಷ್ಪನಮನ ಸಲ್ಲಿಸಿದರು. ಮುಖಂಡ ಸಪ್ತಗಿರಿಶಂಕರ್​ ನಾಯಕ್​, ಬಿಜೆಪಿ ತಾಲೂಕು ಪ್ರಧಾನ ಕಾರ್ಯದರ್ಶಿ ರಂಗನಾಥ್​ಬಾಬು, ನಗರಸಭೆ ಹೆಚ್ಚುವರಿ ಸದಸ್ಯ ಕೃಪಾನಂದ್​, ರಾಮಮೂರ್ತಿ ಇತರರಿದ್ದರು. 
ಜಿಲ್ಲೆ

ಅಖಂಡ ಭಾರತ, ಏಕತೆಗಾಗಿ ಶ್ರಮಿಸಿದ ನಾಯಕ

ನೆಲಮಂಗಲ : ಭಾರತೀಯ ಜನಸಂದ ಸಂಸ್ಥಾಪಕ ಅಖಂಡ ಭಾರತ ಹಾಗೂ ಏಕತೆಗಾಗಿ ಶ್ರಮಿಸಿದ ಡಾ.ಶ್ಯಾಮಾಪ್ರಸಾದ ಮುಖರ್ಜಿ ಅವರ ಆದರ್ಶಗಳು, ಚಿಂತನೆಗಳು ದೇಶದ ಲಾಂತರ ಜನರಿಗೆ ಶಕ್ತಿ ತುಂಬಿವೆ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯೆ ಮಂಜುಳಾ ಹೇಳಿದರು.

ನಗರದ ಸುಭಾಷ್​ ನಗರ ಬಳಿಯ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಡಾ. ಶ್ಯಾಮಾಪ್ರಸಾದ ಮುಖರ್ಜಿ ಅವರ ಬಲಿದಾನ ದಿವಸ್​ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಶ್ಯಾಮಾಪ್ರಸಾದ ಮುಖರ್ಜಿ ಅವರು ಅಂದೇ ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಲು ವಿರೋಧಿಸಿದ್ದರು. ಅಂದು ನಮ್ಮ ದೇಶದಲ್ಲೇ ಇದ್ದ ಕಾಶ್ಮೀರಕ್ಕೆ ಹೋಗಲು ಅನುಮತಿ ಬೇಕಿತ್ತು. ಕಾಶ್ಮೀರ ಮುಖ್ಯಮಂತ್ರಿಗೂ ಪ್ರಧಾನಿ ಅಂತ ಕರೆಯಲಾಗುತ್ತಿತ್ತು. ಒಂದು ದೇಶದಲ್ಲಿ ಎರಡು ಪ್ರಧಾನಿ ಇರಬಾರದೆಂದು ಶ್ಯಾಮಾಪ್ರಸಾದರು ಆಗ್ರಹಿಸಿ ಕಾಶ್ಮೀರ ಪ್ರವೇಶಕ್ಕೆ ಪ್ರಯತ್ನಿಸಿದ್ದರು. ಅಂದಿನ ಶೇಖ್​ ಅಬ್ದುಲ್ಲಾ ಸರ್ಕಾರ ಶ್ಯಾಮಾಪ್ರಸಾದ ಮುಖರ್ಜಿ ಅವರನ್ನು ಬಂಧನ ಮಾಡುತ್ತದೆ. ಜೈಲಿನಲ್ಲಿ ಇದ್ದಾಗಲೇ ಮುಖರ್ಜಿ ನಿಧನರಾದರು ಎಂದರು.

ಇಂದು ನಮ್ಮ ಪಕ್ಷ ಬಲಾಢ್ಯವಾಗಿ ಬೆಳೆದಿದೆ. ವಿಶ್ವದ ಅತೀ ಹೆಚ್ಚು ಕಾರ್ಯಕರ್ತರಿರುವ ಪಕ್ಷ ಎಂದರೆ ಅದು ಬಿಜೆಪಿ. ದೇಶ ಮೊದಲು ಎಂಬ ತತ್ವ ನಮ್ಮ ಪಕ್ಷದ್ದಾಗಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್​ಚೌಧರಿ ಮಾತನಾಡಿ, ಮುಖರ್ಜಿ ಅವರು ಸ್ವಾತಂತ್ರೊ$್ಯತ್ತರದಲ್ಲಿ ಹಿಂದುಗಳ ಮೇಲಿನ ಶೋಷಣೆಯ ವಿರುದ್ಧ ಧ್ವನಿಯಾಗಿದ್ದರು. ಜನ ಸಂ ಪಕ್ಷ ಕಟ್ಟಿ ಜಮ್ಮು&ಕಾಶ್ಮೀರದಲ್ಲಿನ ಹಿಂದುಗಳ ಪರವಾಗಿ ಜೀವವನ್ನೇ ತ್ಯಾಗ ಮಾಡಿದ ಮಹಾನ್​ ನಾಯಕ ಎಂದರು.

ಗಿಡ ನೆಡುವ ಕಾರ್ಯ: ನಗರದ ಡಾ.ಬಿ.ಆರ್​.ಅಂಬೇಡ್ಕರ್​ ಕ್ರೀಡಾಂಗಣ ಬಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಮಹಿಳಾ ಮೋರ್ಚಾದಿಂದ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷ ಮಂಜುಳಾ ಅವರು ಗಿಡ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು.

ತಾಲೂಕು ಅಧ್ಯೆ ಮಂಜುಳಾ ಸುರೇಶ್​,ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಬೃಂಗೇಶ್​, ತಾಲೂಕು ಎಸ್ಟಿ ಮೋರ್ಚಾ ಅಧ್ಯಕ್ಷ ಕೆಂಪರಾಮಯ್ಯ, ಒಬಿಸಿ ಮೋರ್ಚಾ ಅಧ್ಯಕ್ಷ ಲೋಕೇಶ್​, ನಗರ ಅಧ್ಯಕ್ಷ ಕೇಶವ್​, ಮಾಜಿ ಅಧ್ಯಕ್ಷ ರವಿಕುಮಾರ್​, ಮಹಿಳಾ ಮೋರ್ಚಾ ಅಧ್ಯೆ ಮಂಜುಳಾ ಸುರೇಶ್​, ಪ್ರಧಾನ ಕಾರ್ಯದರ್ಶಿ ಶೀಲಾ, ಮುಖಂಡ ಚಂದ್ರಶೆಟ್ಟಿ, ಉಮೇಶ್​, ಗಿರೀಶ್​, ರಮೇಶ್​, ಮಂಜುನಾಥ್​, ರಾಜಮ್ಮಪ್ರಕಾಶ್​, ಸೌಮ್ಯ, ಮಂಜುಳಾ, ಶಾಂತಕುಮಾರಿ, ಗೀತಾರಾಧಾ, ನೀಲಮ್ಮ, ಲತಾ, ಮಂಗಳಾ, ವಿಶಾಲ, ಶೈಲಜಾ ಇತರರು ಇದ್ದರು.