A leader who sacrificed for integrity 
ಜಿಲ್ಲೆ

ಸಮಗ್ರತೆಗೆ ಬಲಿದಾನ ಮಾಡಿದ ನಾಯಕ

ಗಿರೀಶ ಸಗರ

ವಿಜಯಪುರ : ಸದ್ಯ ನಾವೆಲ್ಲರೂ ಬಳಸುವ ಡಿಜಿಟಲ್​ ಇಂಡಿಯಾ ಕನಸಿಗೆ ಮುನ್ನುಡಿ ಬರೆದವರು ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಎಂದು ಜಿಲ್ಲಾ ಕಾಂಗ್ರೆಸ್​ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್​ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಮಂತ್ರಿ ದಿ. ರಾಜೀವ ಗಾಂಧಿ ಪುಣ್ಯತಿಥಿ ಸ್ಮರಣೆ ಕಾರ್ಯಾಕ್ರಮದಲ್ಲಿ ಮಾತನಾಡಿದ ಅವರು, ರಾಜೀವಗಾಂಧಿ ದೇಶದ ಸಮಗ್ರತೆಗಾಗಿ ತ್ಯಾಗ ಬಲಿದಾನ ಮಾಡಿದ ಅಪ್ರತಿಮ ನಾಯಕ ಎಂದರು.

ನಾಗಠಾಣ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಹಜಾನ ಮುಲ್ಲಾ, ರಾಜೇಶ್ವರಿ ಚೊಳಕೆ, ಕಾಶೀಬಾಯಿ ಹಡಪದ, ಪ್ರಧಾನ ಕಾರ್ಯದರ್ಶಿ ವಸಂತ ಹೊನಮೊಡೆ, ಸಲೀಮ ಪೀರಜಾದೆ, ಮಹ್ಮದ ಮುಲ್ಲಾ, ಸಂತೋಷ ಬಾಲಗಾಂವಿ, ಸರಫರಾಜ ಮಿರ್ದೆ, ಕೆ.ಎಸ್​. ಪರಶೆಟ್ಟಿ, ಸಂತೋಷ ಪವಾರ, ಹರೀಶ ಕೌಲಗಿ, ಫಿರೋಜ ಶೇಖ, ಬಾಬಾಜಾನ ಬಾಗವಾನ ಮತ್ತಿತರರಿದ್ದರು.