ದೊಡ್ಡಬಳ್ಳಾಪುರದ ಆರ್​.ಎಲ್​.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸ್​ ಮತ್ತು ಮಾಜಿ ಪ್ರಧಾನಿ ರಾಜೀವ್​ಗಾಂಧಿ ಜನ್ಮದಿನಾಚರಣೆ ಆಚರಿಸಲಾಯಿತು. ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ ವಿದ್ಯಾ ಸಂಸ್ಥೆಯ ಗೌರ್ನಿಂಗ್​ ಕೌನ್ಸಿಲ್​ ಸದಸ್ಯರಾದ ಎನ್​.ತೇಜಸ್ವಿನಿ, ಜೆ.ಆರ್​.ರಾಕೇಶ್​, ವಿದ್ವತ್​, ಮಾನವ ಸಂಪನ್ಮೂಲ ನಿರ್ದೇಶಕ ಎನ್​.ಎಸ್​.ಬಾಬುರೆಡ್ಡಿ, ಡೀನ್​ ಡಾ.ಶ್ರೀನಿವಾಸ ರೆಡ್ಡಿ ಇತರರು ಭಾಗವಹಿಸಿದ್ದರು. 
ಜಿಲ್ಲೆ

ಹಿಂದುಳಿದ ವರ್ಗಕ್ಕೆ ನ್ಯಾಯದ ಧ್ವನಿಯಾದ ನಾಯಕ

ದೊಡ್ಡಬಳ್ಳಾಪುರ : ನಗರದ ಆರ್​.ಎಲ್​.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಲಯನ್ಸ್​ ಕ್ಲಬ್​, ಎನ್​ಎಸ್​ಎಸ್​ ನೇತೃತ್ವದಲ್ಲಿ ಬುಧವಾರ ಡಿ.ದೇವರಾಜ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್​ಗಾಂಧಿ ಜನ್ಮದಿನಾಚರಣೆ, ಸದ್ಭಾವನಾ ದಿನ ಹಮ್ಮಿಕೊಳ್ಳಲಾಯಿತು.

ದೇವರಾಜ್​ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಮಾತನಾಡಿ, ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯ ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಅರಸು ಹಾಗೂ ರಾಜೀವ್​ಗಾಂಧಿ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ಧತೆಯಿಂದ ದೇಶದ ಭವಿಷ್ಯ ಸದೃಢಗೊಳಿಸಿದ್ದಾರೆ ಎಂದರು.

ಜಾಲಪ್ಪನವರ ರಾಜಕಾರಣದ ದಿಕ್ಕುದೆಸೆಯನ್ನು ಸ್ಪಷ್ಟಗೊಳಿಸಿದ್ದು ದೇವರಾಜ್​ ಅರಸು. ಹೀಗಾಗಿ ಅವರ ಹೆಸರನ್ನೇ ವಿದ್ಯಾ ಸಂಸ್ಥೆಗೆ ಇಡಲಾಗಿದೆ. ಎಲ್ಲ ವರ್ಗಗಳ ದನಿಯಾಗಿ, ಯುವಜನರ ಆಶೋತ್ತರಗಳನ್ನು ಪ್ರಭಾವಿಸಿದ್ದು, ಅವರ ಆದರ್ಶ ಪಾಲಿಸಬೇಕು ಎಂದು ಹೇಳಿದರು.

ಯುವಜನರ ಶಕ್ತಿಯಾಗಿದ್ದ ರಾಜೀವ್​ಗಾಂಧಿ ಡಿಜಿಟಲ್​ ಇಂಡಿಯಾದ ಪರಿಕಲ್ಪನೆ ಜಾರಿಗೊಳಿಸಿದ್ದಾರೆ. ಆರಂಭಿಕ ಕಾಲಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು. ಅವರ ಜನ್ಮದಿನದಂದು ಸದ್ಭಾವನಾ ದಿನಾಚರಣೆ ಆಚರಿಸುತ್ತಿರುವುದು ಅರ್ಥಪೂರ್ಣ ಎಂದರು. ಸದ್ಭಾವನಾ ದಿನದ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.

ಜಾಲಪ್ಪ ರಾಜಕೀಯ ನಡೆಗೆ ಅರಸು ಪ್ರಭಾವ : ಜಾಲಪ್ಪ ಲಯನ್ಸ್​ ಸಂಸ್ಥೆ ಅಧ್ಯಕ್ಷ ಕೆ.ಆರ್​.ರವಿಕಿರಣ್​ ಮಾತನಾಡಿ, ದೇವರಾಜ ಅರಸು ಮುಖ್ಯಮಂತ್ರಿಗಳಾಗಿದ್ದಾಗ ಉಳುವವನೇ ಭೂಮಿಯ ಒಡೆಯ ಎಂಬ ೂಷವಾಕ್ಯದಡಿ ಭೂ ಒಡೆತನವನ್ನು ಶೋಷಿತ ವರ್ಗಗಳಿಗೆ ನೀಡಿದರು. ಎಲ್​.ಜಿ.ಹಾವನೂರ್​ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ, ಪ್ರಬಲ ಸಮುದಾಯಗಳ ನಡುಗೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆ ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಅವರದು. ಆರ್​.ಎಲ್​.ಜಾಲಪ್ಪನವರ ರಾಜಕೀಯ ನಡೆಯಲ್ಲಿ ಅರಸು ಅವರ ಒತ್ತಾಸೆ ಪ್ರಮುಖ ಎಂದು ಅಭಿಪ್ರಾಯಪಟ್ಟರು.