ಜಿಲ್ಲೆ

ಹಿರೇಕೆರೂರಲ್ಲಿ ಗಣಪನಿಗೆ ಅದ್ದೂರಿ ವಿದಾಯ

ಹಿರೇಕೆರೂರ: ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಲ್ಲಿ ಗಜಾನನ ಯುವಕ ಸಮಿತಿಯಿಂದ ಪ್ರತಿಷ್ಟಾಪಿಸಿದ್ದ ಗಣಪತಿಯನ್ನು ಶನಿವಾರ ಅದ್ದೂರಿ ಮೆರವಣಿಗೆಯೊಂದಿಗೆ ನಿಮಜ್ಜನ ಮಾಡಲಾಯಿತು.

ಡಿಜೆ ಸೌಂಡ್ ಸಿಸ್ಟಮ್ ಸಂಗೀತ ವಾದ್ಯಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಅದ್ದೂರಿ ಮೆರವಣಿಗೆಯೊಂದಿಗೆ ಸಾಗಿ ಹೊರವಲಯದ ಕುಬಸದ ಕಟ್ಟೆ ಕೆರೆಯಲ್ಲಿ ಧಾರ್ವಿುಕ ಕೈಂಕರ್ಯಗಳ ನೆರವೇರಿಸಿ, ಭಕ್ತಿ ಪೂರ್ವಕವಾಗಿ ವಿಸರ್ಜಿಸಲಾಯಿತು.

ಸುವರ್ಣ ಮಹೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಕಂಠಾಧರ ಅಂಗಡಿ, ಉಪಾಧ್ಯಕ್ಷರಾದ ರಾಜು ತಿಪ್ಪಶೆಟ್ಟಿ, ರಾಜು ಜವಳಿ, ಮಲ್ಲಿಕಾರ್ಜುನ ಹಳಕಟ್ಟಿ, ನವೀನ ಕಣವಿ, ಇಂದುಧರ ಹಿರೇಮಠ, ಬಾಬಣ್ಣ ಅಣಗೊಂಡರ, ಕುಮಾರ ಹಾಲೋನವರ, ಪ್ರಭಣ್ಣ ಕುಬಸದ, ಹೊಳಿಯಪ್ಪ ಅಸುಂಡಿ, ಓಂಕಾರ ಹಲವಾಗಿಲ, ನಂದೀಶ ವಾಲಿ, ಚಂದ್ರಶೇಖರ ಹಾದ್ರಿಹಳ್ಳಿ, ಕೊಟ್ರೇಶ ಮಳಗಿ, ಕುಮಾರ ಹಳಕಟ್ಟಿ, ಪ್ರಭು ನ್ಯಾಮತಿ, ವಿನಾಯಕ ವಾಲಿ, ವಿನಾಯಕ ತಿಪ್ಪಶೆಟ್ಟಿ, ಚಂದನ ಕುಬಸದ, ಕಿರಣ ಕಲ್ಯಾಣಿ, ಸಂದೀಪ ಕಲ್ಯಾಣಿ, ಚಂದನ ತಿಪ್ಪಶೆಟ್ಟಿ, ಶಂಕರ ಕೋರಿ, ಕರಬಸಪ್ಪ ಹಳ್ಳೂರ, ಇತರರಿದ್ದರು.