ಜಿಲ್ಲೆ

ನಾಡ ಬಾಂಬ್ ಸಿಡಿದು ಹಸುವಿನ ಬಾಯಿ ಛಿದ್ರ

ಪ್ರಸಿನ್ ಕೆ.ಆರ್

ಹನೂರು: ತಾಲೂಕಿನ ಕೌದಳ್ಳಿ ಕುರಟ್ಟಿ ಹೊಸೂರು ಮಾರ್ಗದ ಖಾಲಿ ಜಮೀನಿನಲ್ಲಿ ಕಾಡುಹಂದಿಗಳನ್ನು ಕೊಲ್ಲಲು ಇರಿಸಿದ್ದ ನಾಡ ಬಾಂಬ್ ಸಿಡಿದು ಮಂಗಳವಾರ ಹಸು ತೀವ್ರ ಗಾಯಗೊಂಡಿದೆ.

ಗ್ರಾಮದ ಮಹದೇವ ಎಂಬುವರು ಕೌದಳ್ಳಿಕುರಟ್ಟಿ ಹೊಸೂರು ಮಾರ್ಗದ ಶ್ರೀ ಆಂಜನೇಯಸ್ವಾಮಿ ದೇಗುಲ ಬಳಿಯ ಖಾಲಿ ಜಮೀನಿನಲ್ಲಿ ಹಸುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆ ಹುಲ್ಲು ಮೇಯುವಾಗ ಕಚ್ಚಿದ ಪರಿಣಾಮ ಅಲ್ಲಿಯೇ ಇರಿಸಿದ್ದ ಬಾಂಬ್ ಸಿಡಿದು ಹಸುವಿನ ಬಾಯಿ ಛಿದ್ರಗೊಂಡಿದೆ.

ಹೊಯ್ಸಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹದೇವ ಅವರಿಂದ ಮಾಹಿತಿ ಪಡೆದರು. ನಾಡ ಬಾಂಬ್ ಇರಿಸಿದ್ದವರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ರಾಮಾಪುರ ಪೊಲೀಸ್ ಠಾಣೆಯ ಎಎಸ್‌ಐ ಲಿಂಗರಾಜು ದೂರು ದಾಖಲಿಸಿಕೊಂಡಿದ್ದಾರೆ.