ಜಿಲ್ಲೆ

ಆತ್ಮಶುದ್ಧಿಯ ಸಂಕೇತ ದೀಪ

ತುಮಕೂರು ಡೆಸ್ಕ್

*ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಹೇಳಿಕೆ

 ಕೊರಟಗೆರೆ: ದೀಪೋತ್ಸವ ನಮ್ಮ ಸಂಸತಿಯ ಅವಿಭಾಜ್ಯ ಭಾಗ. ದೀಪವು ಕೇವಲ ಬೆಳಕಿನ ಸಂಕೇತವಲ್ಲ, ಅದು ಜ್ಞಾನ, ನೈತಿಕತೆ ಮತ್ತು ಆತ್ಮಶುದ್ಧಿಯ ಪ್ರತಿಕವೂ ಆಗಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಎಲೆರಾಂಪುರ ಕುಂಚಿಟಿಗ ಮಠದ ಆವರಣದಲ್ಲಿರುವ ಲಕ್ಷಿ$್ಮ ನರಸಿಂಹಸ್ವಾಮಿ ದೇವಾಲಯದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಆಚರಿಸಿದ್ದ ಈ ದೀಪೋತ್ಸವದ ತಾತ್ಪರ್ಯವನ್ನು ತಿಳಿದು, ಅದರ ಅರ್ಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಿಜವಾದ ಪೂಜೆ. ದೀಪ ಬೆಳಗಿಸುವುದು ಕತ್ತಲೆಯನ್ನು ದೂರ ಮಾಡುವ ಕೃತ್ಯ, ಇದೇ ರೀತಿಯಾಗಿ ಅಜ್ಞಾನ, ದ್ವೇಷ, ಹಿಂಸೆ ಮುಂತಾದ ಕತ್ತಲೆಯನ್ನು ನಾಶಮಾಡಲು ಆತ್ಮದಿಪ ಹಚ್ಚುವುದು ಅಗತ್ಯ ಎಂದರು.

ಗ್ರಾಪಂ ಅಧ್ಯಕ್ಷೆ ಗೀತಾ ನರಸಿಂಹರಾಜು ಮಾತನಾಡಿ,ದೀಪ ಬೆಳಕಿನಂತೆ ನಮ್ಮ ಬದುಕಿಗೂ ಆಶಾದೀಪ ಬೇಕು. ದೀಪೋತ್ಸವದ ನಿಜಾರ್ಥವೇ ಆತ್ಮಶುದ್ಧಿ ಮತ್ತು ಮಾನವೀಯತೆ ಬೆಳಗಿಸುವುದು ಎಂದು ಹೇಳಿದರು.

ಒಕ್ಕಲಿಗ ಯುವ ಬ್ರಿಗೇಡ್​ ಸಂಸ್ಥಾಪಕ ನಿರ್ದೇಶಕ ನಂಜೇಗೌಡ ನಂಜುಂಡ, ಮಠದ ವ್ಯವಸ್ಥಾಪಕ ಗೋವಿಂದರಾಜು, ಸಂತೋಷ್​, ಸಂಸತ ಪಾಠಶಾಲೆಯ ಶಿಕ್ಷಕರಾದ ಗಿರೀಶ್​, ಬ್ರಮರಾಂಬಿಕ, ರಘು, ಸಿಬ್ಬಂದಿ ಮನೋಹರ, ಮೋಹನ ಇತರರು ಇದ್ದರು.