ಜಿಲ್ಲೆ

ಸಿದ್ದುಗೆ ಥ್ಯಾಂಕ್ಸ್​ ಹೇಳಿದ ಈಶ್ವರಪ್ಪ! ಲೆಹರ್​ ಸಿಂಗ್​ ಗೆಲುವಿಗೆ ಸಹಕರಿಸಿದ ನಿಮಗೆ ಅಭಿನಂದನೆ...

arunakunigal

ಶಿವಮೊಗ್ಗ: ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್​ಸಿಂಗ್​ ಗೆಲ್ಲಲು ಹಾಗೂ ಕಾಂಗ್ರೆಸ್​ನ ಅಭ್ಯರ್ಥಿ ಮನ್ಸೂರ್​ ಅಲಿ ಖಾನ್​ ಮತ್ತು ಜೆಡಿಎಸ್​ನ ಕುಪೇಂದ್ರ ರೆಡ್ಡಿ ಸೋಲಿನಲ್ಲಿ ಮಾಜಿ ಸಿದ್ದರಾಮಯ್ಯ ಅವರ ಪಾತ್ರ ಪ್ರಮುಖ. ಬಿಜೆಪಿಯ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯ ಅವರಿಗೆ ಥ್ಯಾಂಕ್ಸ್​...

ಹೀಗೆಂದು ಕೆ.ಎಸ್​. ಈಶ್ವರಪ್ಪ ಹೇಳಿದ್ದಾರೆ. ಮುಸ್ಲಿಮರ ಬಗ್ಗೆ ಕಾಂಗ್ರೆಸ್​ಗೆ ಇರುವ ಕಳಕಳಿ ಏನು ಎಂಬುದು ರಾಜ್ಯಸಭಾ ಚುನಾವಣೆಯಲ್ಲಿ ಜಗಜ್ಜಾಹಿರಾಗಿದೆ. ಅಲ್ಪಸಂಖ್ಯಾತರ ಮೇಲಿನ ಪ್ರೀತಿ ಕೇವಲ ನಾಟಕ, ಸೋಲು ಖಚಿತ ಎಂಬುದು ಗೊತ್ತಿದ್ದರೂ ಮನ್ಸೂರ್​ ಅಲಿಖಾನ್​ ಅವರನ್ನು ಕಣಕ್ಕಿಳಿಸಿ ವಿಶ್ವಾಸ ದ್ರೋಹ ಬಗೆದಿದ್ದಾರೆ. ಬಿಜೆಪಿಯನ್ನು ಕೋಮುವಾದಿ ಎಂದು ಟೀಕಿಸುವ ಮುಸ್ಲಿಮರು ಮತ್ತು ಪ್ರಗತಿಪರರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಬಿಜೆಪಿ ಕೋಮುವಾದಿ ಪಕ್ಷ ಎಂಬುದನ್ನು ಯಾರೂ ಒಪ್ಪಲ್ಲ, ಸ್ವತಃ ಕಾಂಗ್ರೆಸ್​ ಪಕ್ಷದವರೇ ಈ ಮಾತನ್ನು ಒಪ್ಪುತ್ತಿಲ್ಲ ಎಂದ ಈಶ್ವರಪ್ಪ, ಲೆಹರ್​ ಸಿಂಗ್​ ಗೆಲುವಿಗೆ ಸಹಕರಿಸಿದ ಸಿದ್ದರಾಮಯ್ಯಗೆ ಅಭಿನಂದನೆ ಸಲ್ಲಿಸುವೆ ಎಂದು ಕುಟುಕಿದರು.

ಕಾಂಗ್ರೆಸ್​ ಕೋಮುವಾದಿ ಮತ್ತು ರಾಷ್ಟ್ರದ್ರೋಹಿ. ಸಿದ್ದರಾಮಯ್ಯ ಆ ಪಕ್ಷದಲ್ಲಿದ್ದಾರೆ. ನಾನು ಬಿಜೆಪಿಯಿಂದ ಬೆಳೆದು ಬಂದಿದ್ದೇನೆಯೇ ವಿನಃ ಸಿದ್ಧರಾಮಯ್ಯ ಕೃಪಾಕಟಾಕ್ಷದಿಂದಲ್ಲ. ಬಿಜೆಪಿ ನನ್ನನ್ನು ಸಾಮಾನ್ಯ ಕಾರ್ಯಕರ್ತನಿಂದ ಉಪ ಮುಖ್ಯಮಂತ್ರಿವರೆಗೂ ಬೆಳೆಯಲು ಅವಕಾಶ ಮಾಡಿಕೊಟ್ಟಿದೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.