ಬೆಂಗಳೂರು: ಕೆಪಿಟಿಸಿಎಲ್ ಸಹಾಯಕ ಇಂಜಿನಿಯರ್ ಹಾಗೂ ಕಿರಿಯ ಇಂಜಿನಿಯರ್ ಹುದ್ದೆಗಳ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ತಾತ್ಕಾಲಿಕ ಸರಿ ಉತ್ತರಗಳಿಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಧಾರ ಸಹಿತವಾಗಿ ಇ-ಮೇಲ್ recruitment2021kea@gmail.com ವಿಳಾಸಕ್ಕೆ ಸೆ.2ರ ಸಂಜೆ 5.30ರೊಳಗೆ ಕಳುಹಿಸಬಹುದು.
ಅಭ್ಯರ್ಥಿಗಳು ಆಕ್ಷೇಪಣೆಗಳನ್ನು ಸಲ್ಲಿಸುವ ವೇಳೆ ಹುದ್ದೆ, ಪತ್ರಿಕೆಯ ಹೆಸರು, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಮತ್ತು ನಿರ್ದಿಷ್ಟವಾದ ನಿಗದಿತ ಆಕ್ಷೇಪಣೆಯನ್ನು ವಿವರಗಳೊಂದಿಗೆ ಸಲ್ಲಿಸಬೇಕು. ಹುದ್ದೆಯ ವಿವರ, ಪ್ರಶ್ನೆ ಸಂಖ್ಯೆ/ಆಧಾರ ರಹಿತವಾಗಿ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ. ವಿಷಯ ತರ ಸಮಿತಿಯು ನಿರ್ಧರಿಸುವ ಕೀ ಉತ್ತರಗಳೇ ಅಂತಿಮವಾಗಿರುತ್ತದೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.