ಜಿಲ್ಲೆ

ಮಳೆ ನಡುವೆಯೂ ಕಾರಹುಣ್ಣಿಮೆ ಸಡಗರ

arunakunigal

ಬೀದರ್: ಮಳೆ ನಡುವೆಯೂ ಕಾರಹುಣ್ಣಿಮೆ ಸಡಗರ ಜಿಲ್ಲೆಯಲ್ಲಿ ಕಳೆಗಟ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರೈತರು ಆಚರಿಸುವ ಪ್ರಮುಖ ಹಬ್ಬ ಕಾರಹುಣ್ಣಿಮೆ. ಮುಂಗಾರು ಆರಂಭದಲ್ಲಿ ಮೊದಲ ಹಬ್ಬ ಇದಾಗಿದ್ದು, ಜಾನುವಾರುಗಳಿಗೆ ಸಿಂಗರಿಸಿ ಮೆರವಣಿಗೆ ಮಾಡುತ್ತಾ ಸಂಭ್ರಮಿಸುತ್ತಾರೆ.

ಬೀದರ್​ನ ಚಾಂಗಲೇರಾ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಗುರುವಾರ ರೈತರು ತಮ್ಮ ಜೀವನಾಡಿಯಾದ ಗೋವುಗಳಿಗೆ ಸಿಂಗರಿಸಿ ಮಳೆ ನಡುವೆಯೇ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.